ನಟಿ ಮಹಾಲಕ್ಷ್ಮಿಗೆ ರವೀಂದರ್ ಡಿವೋರ್ಸ್ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

ಕಳೆದ ಏಳೆಂಟು ತಿಂಗಳಿನಿಂದ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ 

ಕಳೆದ ವರ್ಷ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ಈ ಜೋಡಿ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು  

ಅಂದಿನಿಂದಲೂ ಇವರ ಮದುವೆ ವಿಚಾರಕ್ಕೆ ಬಹಳಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ.  

ಎಲ್ಲಿ ನೋಡಿದರೂ ಈ ಜೋಡಿಯದ್ದೆ ವಿಷಯವಾಗಿದ್ದು, ಇವರು ಏನೇ ಮಾಡಲಿ ಅದರ ಬಗ್ಗೆ ಚರ್ಚೆ ಭಾರಿ ಜೋರಾಗಿ ನಡೆಯುತ್ತದೆ. 

ಇದಕ್ಕೆ ಕಾರಣ ಈ ಜೋಡಿಯ ಲುಕ್ . ಅತ್ಯಂತ ಸುಂದರಿಯಾಗಿರುವ ನಟಿ ಮಹಾಲಕ್ಷ್ಮಿ, ತೀರಾ ದಪ್ಪ ಇರುವ ನಿರ್ಮಾಪಕ ರವೀಂದರ್ ಜೊತೆ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕೆ  

ಬಾಹ್ಯ ರೂಪ ನೋಡಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು,ಅದರಲ್ಲಿಯೂ ಮದುವೆಯಾಗದ ಹುಡುಗರು ಈ ಜೋಡಿಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ, ಹುಡುಗಿಯರು ಈಕೆ ಹಣಕ್ಕಾಗಿಯೇ ಮದುವೆಯಾಗಿದ್ದಾರೆ ಎನ್ನುತ್ತಿದ್ದಾರೆ. 

ನಿರ್ಮಾಪಕ ರವೀಂದರ್​​ ಅವರ ಆಸ್ತಿ ನೋಡಿ ಮಹಾಲಕ್ಷ್ಮಿ ಮದುವೆಯಾಗಿದ್ದು, ಈ ಜೋಡಿ ಒಟ್ಟಾಗಿ ಇರುವ ಚಾನ್ಸೇ ಇಲ್ಲ ಎಂದವರೇ ಹೆಚ್ಚು.  

ಅದರಂತೆ, ಇತ್ತೀಚಿಗೆ ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಕತ್ ಸದ್ದು ಮಾಡಿತ್ತು. 

ಅದಕ್ಕೆ, ಇದೀಗ ಈ ಸುದ್ದಿಗೆ ಈ ಜೋಡಿ ಸಾಮಾಜಿಕ ಜಾಲತಾಣದ ಮೂಲಕವೇ ವಿಚ್ಛೇದನ ಸಂಬಂಧಿಸಿದಂತೆ ಕ್ಲಾರಿಟಿ ಕೊಟ್ಟಿದೆ .  

ಹೌದು, ಈ ಕುರಿತು ನಟಿ ಮಹಾಲಕ್ಷ್ಮೀ ಗಂಡ ರವೀಂದರ್​ ಜೊತೆ ಇರುವ ಫೋಟೋವನ್ನು ಶೇರ್​ ಮಾಡಿ, ಗಾಳಿ ಸುದ್ದಿ ಹರಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.  

ನಟಿ ಮಹಾಲಕ್ಷ್ಮೀ ಫೋಟೋ ಶೇರ್​ ಮಾಡಿ ಅವರು ನೀಡಿರುವ ಕ್ಯಾಪ್ಷನ್​, ಈ ಜೋಡಿ ಸಕತ್​ ಖುಷಿಯಾಗಿದೆ ಎಂಬುದು ಗೊತ್ತಾಗುತ್ತದೆ . 

ನಟಿ ಮಹಾಲಕ್ಷ್ಮಿ, 'ನೀವು ನನ್ನ ಭುಜದ ಮೇಲೆ ಕೈ ಹಾಕಿದಾಗ, ನಾನು ಈ ಜಗತ್ತಿನಲ್ಲಿ ಏನೂ ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನನಗಾಗುತ್ತದೆ.   

ನನ್ನ ಹೃದಯವು ನಿನ್ನಿಂದ ತುಂಬಿದೆ. ಅಮ್ಮು ಐ ಲವ್​ ಯೂ' ಎಂದು ಬರೆದುಕೊಂಡಿದ್ದಾರೆ. 

ಈ ಪೋಸ್ಟ್​ಗೆ ರವೀಂದರ್​ ಕೂಡ ಐ ಲವ್​ ಯೂ ಟೂ ಎಂದು ಕಾಮೆಂಟ್ ಮಾಡಿದ್ದು, ವಿಚ್ಛೇದನ ಬಗ್ಗೆ ಗಾಳಿ ಸುದ್ದಿ ಹರಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.  .