Gruhalakshmi yojana : ಗೃಹಲಕ್ಷ್ಮಿ ಯೋಜನೆಯ ಯಜಮಾನಿಯರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ಗೃಹಲಕ್ಷ್ಮಿ ಯೋಜನೆಯ 12 ಮತ್ತು 13 ನೇ ಕಂತಿನ ಹಣ ಕೆಲ ಮಹಿಳೆಯರಿಗೆ ಜಮಾ ಆಗುವುದಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.
ಹೌದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಹಣ ಪಡೆಯುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಸಚಿವೆ ಹೆಬ್ಬಾಳ್ಕರ್ ಅವರ ನಿರ್ದೇಶನದಂತೆ e-Governance ಮೂಲಕ ಅನರ್ಹ ಫಲಾನುಭವಿಗಳ ಲಿಸ್ಟ್ ಮಾಡಿಸಲಾಗಿದೆಯಂತೆ. ಸ್ಕೀಂಗೆ ಅರ್ಹ ಅಲ್ಲದವರಿಗೆ ಅಧಿಕೃತವಾಗಿ ಹಿಂಬರಹ ನೀಡಲು ಸರ್ಕಾರ ಸಿದ್ದವಾಗಿದ್ದು, ಸಣ್ಣ ಉದ್ದಿಮೆ ಮಾಡಿಕೊಂಡು GST ನಂಬರ್ ಪಡೆದವರಿಗೂ ಕೂಡ ಇದರ ಎಫೆಕ್ಟ್ ತಟ್ಟಲಿದೆ.
ಇದನ್ನೂ ಓದಿ: ಇಂದಿನಿಂದ 3 ದಿನ ಭಾರೀ ಮಳೆ – ಹವಾಮಾನ ಇಲಾಖೆ
Gruhalakshmi yojana : ಯಾರು ಅರ್ಹರಲ್ಲ? ಇವರಿಗೆ ಬರಲ್ಲ 2 ಸಾವಿರ ರೂ.
ಮಹಿಳೆಯರು ಅಥವಾ ಅವರ ಪತಿ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ.
ಹಾಗೆಯೇ ಆದಾಯ ತೆರಿಗೆ ಪಾವತಿಸುತ್ತಿರುವ ಅಥವಾ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಫಲಾನುಭವಿಗಳನ್ನು ಸಹ ಅನರ್ಹಗೊಳಿಸಲಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲು ಕಾರಣವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: 945 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ – ಇಲ್ಲಿದೆ ಮಾಹಿತಿ