ಸ್ತ್ರೀ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು ಹಾಗೂ ಆತ್ಮ ರಕ್ಷಣೆ ಹೇಗೆ..?

ಹೆಣ್ಣು ಮಕ್ಕಳಿಗೆ ಸಬಲೀಕರಣ ಅಗತ್ಯ ಗಂಡು, ಹೆಣ್ಣೆಂಬ ತಾರತಮ್ಯವನ್ನು ಅಳಿಸಿ ಹಾಕಿ, ಪೋಷಕರು ಗಂಡು ಮಕ್ಕಳಷ್ಟೇ ಆದ್ಯತೆಯನ್ನು ಹೆಣ್ಣು ಮಕ್ಕಳಿಗೆ ನೀಡಬೇಕಾಗಿದ್ದು, ಉತ್ತಮ ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳು ಸಬಲರಾಗಬಲ್ಲರು. ಆದ್ದರಿಂದ ಶಿಕ್ಷಣ ಇಲಾಖೆ…

women empowerment

ಹೆಣ್ಣು ಮಕ್ಕಳಿಗೆ ಸಬಲೀಕರಣ ಅಗತ್ಯ

ಗಂಡು, ಹೆಣ್ಣೆಂಬ ತಾರತಮ್ಯವನ್ನು ಅಳಿಸಿ ಹಾಕಿ, ಪೋಷಕರು ಗಂಡು ಮಕ್ಕಳಷ್ಟೇ ಆದ್ಯತೆಯನ್ನು ಹೆಣ್ಣು ಮಕ್ಕಳಿಗೆ ನೀಡಬೇಕಾಗಿದ್ದು, ಉತ್ತಮ ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳು ಸಬಲರಾಗಬಲ್ಲರು. ಆದ್ದರಿಂದ ಶಿಕ್ಷಣ ಇಲಾಖೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು.

ಗುಡ್ ಟಚ್, ಬ್ಯಾಡ್ ಟಚ್

ಪುಟ್ಟಮಕ್ಕಳಿಗೆ ಯಾರು ಬೇಕಾದರೂ ಕಿರುಕುಳ ಕೊಡುತ್ತಾರೆ. ಸಂಬಂಧಿಕರು, ನೆರೆಹೊರೆಯವರು, ಶಾಲೆಯಲ್ಲಿ ಸಿಬ್ಬಂದಿ, ಸಹಪಾಠಿಗಳು ಹೀಗೆ ಯಾರು ಸಹ ಆಗಿರಬಹುದಾಗಿದ್ದು, ಹೀಗೆ ಆಗಬಾರದು ಅಂದರೆ ಮಕ್ಕಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಗೊತ್ತಿರಬೇಕು. ಇದಕ್ಕಾಗಿ ಮಕ್ಕಳಿಗೆ ಗುಡ್‌ ಟಚ್, ಬ್ಯಾಡ್ ಟಚ್ ಬಗ್ಗೆ ಹೇಳಿ ಕೊಡುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಸಿಹಿಸುದ್ದಿ : ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ಭೂಮಿ ಮಂಜೂರು!

Vijayaprabha Mobile App free

ಆತ್ಮರಕ್ಷಣೆಗೆ ಕರಾಟೆ ಕಲಿಕೆ ಅಗತ್ಯ

ಅನಿವಾರ್ಯ ಸ್ಥಿತಿಯಲ್ಲಿ ಎದುರಾಗುವ ಸವಾಲು, ದುಷ್ಕರ್ಮಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಹೆಣ್ಣು ಮಕ್ಕಳು ಕರಾಟೆ ಕಲಿಯುವುದು ಅಗತ್ಯವಾಗಿದು, ಮಹಿಳೆಯರ ಮೇಲೆ ದಿನೆ ದಿನೇ ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಆತ್ಮರಕ್ಷಣೆ ಅವಶ್ಯಕ. ಆದರೆ, ಕಲೆ ಬಗ್ಗೆ ಗೊತ್ತಿಲ್ಲದಿದ್ದರೆ ಆತ್ಮರಕ್ಷಣೆ ಸಾಧ್ಯವಿಲ್ಲ. ಮಹಿಳೆಯರು ಆತ್ಮರಕ್ಷಣೆ ಕಲೆಯನ್ನು ಕಲಿಯಬೇಕು.

ಬೇಟಿ ಬಚಾವೋ, ಬೇಟಿ ಪಢಾವೋ

ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ಮಹತ್ತರ ಉದ್ದೇಶದಿಂದ ಜನವರಿ 22, 2015 ರಂದು ಹರಿಯಾಣದ ಪಾಣಿಪತ್ ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಯೋಜನೆಯಿ೦ದ ಅಲ್ಪಮಟ್ಟಿಗೆ ಮಹಿಳಾ ಸಾಕ್ಷರತೆ ಮತ್ತು ಸ್ತ್ರೀ-ಪುರುಷರ ಅನುಪಾತ ಹೆಚ್ಚಾಗಿದೆ ಎ೦ದು ಹೇಳಲಾಗುತ್ತಿದೆ.

ಸುಕನ್ಯಾ ಸಮೃದ್ಧಿ ಯೋಜನೆ

ಬಡ ಕುಟು೦ಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡುವ ಯೋಜನೆಯಾಗಿದ್ದು, ಹೆಣ್ಣು ಮಗು ಜನಿಸಿದ ನಂತರ 10 ವರ್ಷದ ಒಳಗಾಗಿ ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು. ಈ ಹಣಕ್ಕೆ ಶೇ.8.6ರಷ್ಟು ಬಡ್ಡಿ ಬರಲಿದ್ದು, ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರಾಲಿದ್ದು,ಹೆಣ್ಣು ಮಗುವಿನ 10 ವರ್ಷ ತುಂಬಿದ ಬಳಿಕ ಉಳಿತಾಯ ಮಾಡಿದ ಹಣದಲ್ಲಿ ಶೇ.50ರಷ್ಟು ಹಣವನ್ನು ಶೈಕ್ಷಣಿಕ ಖರ್ಚಿಗೆ ಬಳಸಿಕೊಳ್ಳಬಹುದು.

ಇದನ್ನೂ ಓದಿ: ಮುಂದಿನ ಸಿಎಂ ಘೋಷಣೆ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ- ವಿಜಯೇಂದ್ರ ಭೇಟಿ : ಭಾರಿ ಸಂಚಲನ

ಧನಲಕ್ಷ್ಮಿ ಯೋಜನೆ

ಹೆಣ್ಣು ಮಗುವಿನ ಜನನ ನೋಂದಣಿಯ ವೇಳೆ 5,000 ರೂ. ನೀಡಲಾಗುವುದು. ನ೦ತರ ಶಿಶು ಅವಸ್ಥೆಯ ವಿವಿಧ ಹಂತಗಳಲ್ಲಿ 1,250 ರೂ. ಪಾವತಿಸಲಾಗುವುದು. ಸಾಲ ದಾಖಲಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಣ ಪೂರ್ಣಗೊಂಡಗ 3500 ರೂ. ಸಿಗಲಿದೆ. 8 ನೇ ತರಗತಿವರೆಗಿನ ಮಾಧ್ಯಮಿಕ ಶಾಲಾ ದಾಖಲಾತಿ ವೇಳೆ 3,750 ರೂ. ಸಿಗಲಿದೆ. ಹೆಣ್ಣು ಮಗುವಿಗೆ 18 ವರ್ಷವಾದಾಗ 1 ಲಕ್ಷದ ವಿಮಾ ಮೆಚೂರಿಟಿ ಕವರ್ ನೀಡಲಾಗುವುದು.

ಬಾಲಿಕಾ ಸಮೃದ್ಧಿ ಯೋಜನೆ

ಬಾಲಿಕಾ ಸಮೃದ್ಧಿ ಯೋಜನೆಯನ್ನು ಭಾರತ ಸರ್ಕಾರವು ವ್ಯಾಖ್ಯಾನಿಸಿದ೦ತೆ ಬಡತನ ರೇಖೆಗಿಂತ ಕೆಳಗಿರುವ ಕುಟು೦ಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ನೀಡಲಾಗುವುದು. BPL ಕುಟುಂಬಗಳ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಿಗೆ 500/- ರೂ ನೀಡಲಾಗುವುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.