ಸಮುದ್ರದಲ್ಲಿ ಸಿಲುಕಿದ್ದ ಹೈದರಾಬಾದ್ ಮೂಲದ ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ನಡೆದಿದೆ. ಪ್ರಿಯಾಂಕಾ ನಿರ್ಮಲ ಕುಮಾರ(35) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಹೈದರಾಬಾದ್ ಮೂಲದ 15…

ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ನಡೆದಿದೆ. ಪ್ರಿಯಾಂಕಾ ನಿರ್ಮಲ ಕುಮಾರ(35) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ.

ಹೈದರಾಬಾದ್ ಮೂಲದ 15 ಮಂದಿ ಪ್ರವಾಸಿಗರ ತಂಡ ಗೋಕರ್ಣ ಪ್ರವಾಸಕ್ಕೆ ಬಂದಿದ್ದು, ಇಲ್ಲಿನ ಬೀಚ್‌ನಲ್ಲಿ ಮಧ್ಯಾಹ್ನ ವೇಳೆಗೆ ಈಜಲು ತೆರಳಿದ್ದರು. ಈ ವೇಳೆ ಓರ್ವ ಪ್ರವಾಸಿಗ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಪ್ರವಾಸಿಗರು ಸಹಾಯಕ್ಕಾಗಿ ಕೂಗಿದ್ದರು.

ಈ ವೇಳೆ ಪ್ರವಾಸಿಗರನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ನಾಗೇಂದ್ರ ಎಸ್ ಕುರ್ಲೆ, ಮಂಜುನಾಥ್ ಹರಿಕಂತ್ರ,  ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ತಕ್ಷಣ ಧಾವಿಸಿ ಬೋಟ್ ಮೂಲಕ ತೆರಳಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.