ಭಾರತದಲ್ಲಿ ಸರಿ ಸುಮಾರು 550 ಮಿಲಿಯನ್ ಬಳಕೆದಾರರನ್ನ ಹೊಂದಿರುವ ವಾಟ್ಸಪ್ ,ಇದೀಗ ಮತ್ತೊಂದು ಪ್ರಮುಖ ಆಯ್ಕೆಯೊಂದರ ಫೀಚರ್‌ನ್ನು ನೀಡಿದೆ.
ಹೌದು, ವಾಟ್ಸಪ್ ತನ್ನ ಐಒಎಸ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್‌ನ್ನು ವಾಟ್ಸಪ್ ಪರಿಚಯಿಸಿದ್ದು, ಇದರ ಮೂಲಕ ಸ್ಟೇಟಸ್‌ನಲ್ಲಿ ವಾಯ್ಸ್ ಮೆಸೇಜ್‌ನ್ನು ಹಂಚಿಕೊಳ್ಳಬಹುದು.
ಇನ್ನು, ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿನಲ್ಲೇ ನೀಡಲಾಗಿತ್ತು. ಇದೀಗ ಅದು ಯಶಸ್ಸು ಕಂಡ ಬೆನ್ನಲೇ ಐಫೋನ್ ಬಳಕೆದಾರರಿಗೆ ಇದನ್ನ ನೀಡಿದೆ.