ಸ್ಕಿಲ್ ಇಂಡಿಯಾ | ಜುಲೈ 15, 2015ರಂದು ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನದಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಸ್ಕಿಲ್ ಇಂಡಿಯಾ(Skill India) ಅಭಿಯಾನವನ್ನು ಆರಂಭಿಸಿತು. ಸ್ಕಿಲ್ ಇಂಡಿಯಾ ಅಭಿಯಾನದ ಉದ್ದೇಶಗಳು, ಪ್ರಮುಖ ಸವಾಲುಗಳು ಹಾಗು ಈ ಯೋಜನೆಯಿಂದ ಯುವ ಜನತೆಗೆ ಸಿಗುವ ಲಾಭವೇನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಇದೇ ರೀತಿಯ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Ration Card EKYC | ಪಡಿತರ ಚೀಟಿದಾರರ ಗಮನಕ್ಕೆ; E-KYC ಮಾಡಿಸಲು ಇಂದೇ ಕೊನೆಯ ದಿನ
ಹೌದು, ದೇಶದ ಯುವಕರಿಗೆ ತಮ್ಮಲ್ಲಿರುವ ಯಾವುದೇ ಕೌಶಲ್ಯದ ಮೂಲಕ ಉದ್ಯೋಗ ಪಡೆಯುವ ಅವಕಾಶಗಳನ್ನು ಸೃಷ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಅಭಿಯಾನವನ್ನು ದೇಶದ ವಿವಿಧ ನಗರಗಳು ಮತ್ತು ಹಳ್ಳಿಗಳಲ್ಲಿ ಆರಂಭಿಸಲಾಗಿದ್ದು,ಈ ಅಭಿಯಾನದ ಮುಖ್ಯ ಉದ್ದೇಶ ದೇಶದ ಎಲ್ಲಾ ಯುವಕರ ಕೌಶಲ್ಯವನ್ನು ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
ಸ್ಕಿಲ್ ಇಂಡಿಯಾ ಮಿಷನ್‌ನ ಉದ್ದೇಶಗಳು
ಭಾರತೀಯ ಯುವಕರಲ್ಲಿ ಪ್ರತಿಭೆಗಳ ಬೆಳವಣಿಗೆಗೆ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ. ದೇಶದಲ್ಲಿ ಬಡತನವನ್ನು ಕಡಿಮೆ ಮಾಡುವುದು. ಭಾರತೀಯ ವ್ಯವಹಾರಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸ್ಕಿಲ್ ಇಂಡಿಯಾ ಮಿಷನ್ ಮೂಲಕ, ಸಂವಹನ ಕೌಶಲ್ಯದ ಮೂಲಕ ಯುವಕರಲ್ಲಿ ಆತ್ಮವಿಶ್ವಾಸ ತುಂಬುವುದು ಮುಖ್ಯ ಉದ್ದೇಶವಾಗಿದ್ದು, ಪದವಿ ಪಡೆದರೂ ಉದ್ಯೋಗವಿಲ್ಲದ ಯುವಕರು ಕೂಡ ಈ ಯೋಜನೆಯ ಮೂಲಕ ಪ್ರಯೋಜನ ಪಡೆಯುತ್ತಾರೆ.
ಇದನ್ನೂ ಓದಿ: Krishna Byre Gowda : ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವರು; ನಿಮ್ಮ ಖಾತೆಗೆ ಹಣ..!
ಸ್ಕಿಲ್ ಇಂಡಿಯಾ ಯೋಜನೆಯ ಪ್ರಮುಖ ಸವಾಲುಗಳು
ಸ್ಕಿಲ್ ಇಂಡಿಯಾ ಮಿಷನ್ (skill india mission) ಅಡಿಯಲ್ಲಿ, ದೇಶದಾದ್ಯಂತ 3000 ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯಲಾಗಿದ್ದು, ಸ್ಕಿಲ್ ಇಂಡಿಯಾ ಸೆಂಟರ್ ತೆರೆಯಲು ಅನೇಕ ಜನರು ತಮ್ಮ ಉದ್ಯೋಗವನ್ನು ತೊರೆದು ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ ಸರ್ಕಾರವು ಸ್ಕಿಲ್ ಇಂಡಿಯಾ ಅಭಿಯಾನದಲ್ಲಿ ಆಗಾಗ್ಗೆ ಬದಲಾವಣೆ ಮಾಡುತ್ತಿರುವುದರಿಂದ ಅನೇಕ ಕೇಂದ್ರಗಳನ್ನು ಮುಚ್ಚಲಾಗಿದ್ದು, ಸ್ಕಿಲ್ ಇಂಡಿಯಾ ಸೆಂಟರ್‌ನಿಂದ ತರಬೇತಿ ಪಡೆದ ಸುಮಾರು 57 ಪ್ರತಿಶತ ಯುವಕರು ಮಾತ್ರ ಉದ್ಯೋಗವನ್ನು ಪಡೆದಿದ್ದಾರೆ. ಇನ್ನು, ಹಲವು ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ.
ಕೇಂದ್ರದ ಸ್ಕಿಲ್ ಇಂಡಿಯಾ ಯೋಜನೆಯಿಂದ ಯುವ ಜನತೆಗೆ ಲಾಭ!
ಸ್ಕಿಲ್ ಇಂಡಿಯಾ ಕಾರ್ಯಕ್ರಮವು ಅಭ್ಯರ್ಥಿಗಳಿಗೆ ಅಗತ್ಯವಾದ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯೊಂದಿಗೆ ಸಜ್ಜುಗೊಳಿಸುವುದಲ್ಲದೆ, ಉತ್ತಮ ವೇತನ ನೀಡುವ ಉದ್ಯೋಗಗಳನ್ನು ಪಡೆಯಲು ಸಹಕಾರಿಯಾಗಿದೆ. ಸ್ಕಿಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅಭ್ಯರ್ಥಿಗಳಿಗೆ ಮೇಲ್ವಿಚಾರಣೆ ಮತ್ತು ಉದಯೋನ್ಮುಖ ಉದ್ಯಮಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸುವುದಲ್ಲದೆ, ಪದವಿ ಪಡೆದರೂ ಉದ್ಯೋಗವಿಲ್ಲದ ಯುವಕರು ಕೂಡ ಈ ಯೋಜನೆಯ ಮೂಲಕ ಪ್ರಯೋಜನ ಪಡೆಯುತ್ತಾರೆ.
ಇದನ್ನೂ ಓದಿ: Bagar Hukum | ಬಗರ್ ಹುಕುಂ ರೈತರಿಗೆ ಭರ್ಜರಿ ಗುಡ್ ನ್ಯೂಸ್!
ದೇಶದ ಯುವಕರಿಗೆ ಸ್ಕಿಲ್ ಇಂಡಿಯಾ ಯೋಜನೆಯಿಂದ ಕೌಶಲ್ಯ ತರಬೇತಿ ನೀಡುವ ಯೋಜನೆ!
ಸುಮಾರು 40 ಕೋಟಿ ಜನರಿಗೆ ತರಬೇತಿ ಮತ್ತು ಉದ್ಯೋಗ ನೀಡುವ ಗುರಿಯೊಂದಿಗೆ ಸ್ಕಿಲ್ ಇಂಡಿಯಾ ಮಿಷನ್ 2015ರ ಜುಲೈ 15ರಂದು ಆರಂಭವಾಗಿದ್ದು, ದೇಶದ ಯುವಕರಿಗೆ ತಮ್ಮಲ್ಲಿರುವ ಯಾವುದೇ ಕೌಶಲ್ಯದ ಮೂಲಕ ಉದ್ಯೋಗ ಪಡೆಯುವ ಅವಕಾಶಗಳನ್ನು ಸೃಷ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಚರ್ಮಕಾರ, ಕುಂಬಾರ ಪ್ಲಂಬರ್, ಎಲೆಕ್ಟ್ರಿಷಿಯನ್, ಫ್ಯಾಶನ್ ಡಿಸೈನರ್, ಸೋಲಾರ್ ಪ್ಲಾಂಟ್, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್, ಮಾರ್ಕೆಟಿಂಗ್ ಸ್ಕಿಲ್ಸ್ ಇತ್ಯಾದಿ ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಡಿಯೋ ಕೃಪೆ – TV VIKRAMA