ಚೆನ್ನೈ: ವೈದ್ಯನೊಬ್ಬ ಪ್ರೀತಿಸಿ ಮದುವೆ ಮಾಡಿಕೊಂಡ ಹೆಂಡತಿ ವಿಚ್ಛೇದನ ಕೋರಿದ್ದರಿಂದ ಆಕೆಗೆ ಕತ್ತಿಯಿಂದ ಚುಚ್ಚಿ, ಮೇಲೆ ಕಾರನ್ನು ಹತ್ತಿಸಿ ಸಾಯಿಸಿರುವ ವಿಷಾದಕರ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಕೊಯಮತ್ತೂರಿನ ಗೋಕುಲ್ ಕುಮಾರ್ (40), ಕೊಲತೂರ್‌ನ ಕಾಟನ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಿಕಟ ಸಂಬಂಧಿಯೊಬ್ಬರು ಕೀರ್ತಾನಾ (35) ರನ್ನು ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಮದುವೆಯಾದ ನಂತರ ಮನೆ ಅಳಿಯನಾಗಿ ಬಂದ ಗೋಕುಲ್ ಕುಮಾರ್ ಅವರು ಚೆಂಗಲ್ಪಟ್ಟು ಜಿಲ್ಲೆಯ ಮಧುರಂಟಕಂ ಬಳಿಯ ಕೃಷ್ಣಪ್ರನಿಯಗರದಲ್ಲಿ ಕೀರ್ತನಾ ಅವರ ತಾಯಿ ಕುಮಾರಿ ಮತ್ತು ತಂದೆ ಮುರಹರಿ ಅವರ ಜೊತೆಯಲ್ಲೇ ಇದ್ದರು. ಆದರೆ, ಇತ್ತೀಚೆಗೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯದ ಏರ್ಪಟ್ಟ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯವನ್ನು ಆಶ್ರಯಿಸಿದ್ದು, ಅಂದಿನಿಂದ ಇಬ್ಬರೂ ಬೇರೆ ಬೇರೆ ಇದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕೀರ್ತನ ಮನೆಗೆ ಬಂದ ಗೋಕುಲ್ ಅವರೊಂದಿಗೆ ಗಲಾಟೆ ಮಾಡಿದ್ದೂ, ಇಬ್ಬರ ನಡುವೀಣೆ ಈ ಜಗಳ ತಾರಕಕ್ಕೇರಿದೆ. ಇದರಿಂದ ಕೋಪಗೊಂಡ ಗೋಕುಲ್ ಅವನ ಪಕ್ಕದಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಅಡ್ಡಬಂದ ಮಾವ ಮುರಹರಿಯ ಮೇಲೆ ದಾಳಿ ಮಾಡಿದ್ದಾನೆ.
ಆನಂತರ ಪತ್ನಿ ಕೀರ್ತನಳಿಗೆ ನಿರ್ದಾಕ್ಷಿಣ್ಯವಾಗಿ ಕತ್ತಿಯಿಂದ ಇರಿದಿದ್ದಾನೆ. ಆತನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೀರ್ತನ ಬೀದಿಗೆ ಓಡಿದ್ದಾಳೆ. ಇದರಿಂದ ಅವಳನ್ನು ಕಾರಿನಲ್ಲಿ ಬೆನ್ನಟ್ಟಿ, ಕಾರನ್ನು ಮೇಲೆ ಹತ್ತಿಸಿ ಅವಳನ್ನು ಕೊಲೆ ಮಾಡಿ ಹೋಗಿದ್ದಾನೆ. ಆಕೆಯ ಪೋಷಕರು ಮತ್ತು ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರು ಬದುಕುಳಿಯಲಿಲ್ಲ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೀರ್ತನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದರು. ಕೀರ್ತನ ಅವರ ತಂದೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಗೋಕುಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.