ಮಾಜಿ ಎಂಎಲ್ಸಿ ಮುದೇಗೌಡ್ರ ವೀರಭದ್ರಪ್ಪ ನಿಧನ; ದಾವಣಗೆರೆಯಲ್ಲಿ ನೂತನ ವಿವಿ ಸ್ಥಾಪನೆಗೆ ಇವರೇ ಕಾರಣ..!

ದಾವಣಗೆರೆ: ವಿಧಾನಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ (86) ಅನಾರೋಗ್ಯದಿಂದ ನಿಧನರಾಗಿದ್ದು, ಮೃತರ ದೇಹವನ್ನು ಇಂದು ಬೆ.10.30ಕ್ಕೆ ದಾವಣಗೆರೆಯ ಜೆಜೆಎಂಸಿ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೌದು, ತರಳಬಾಳು ಬಡಾವಣೆಯಲ್ಲಿ ವಾಸವಿದ್ದ…

Mude Gowdra Veerabhadrappa

ದಾವಣಗೆರೆ: ವಿಧಾನಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ (86) ಅನಾರೋಗ್ಯದಿಂದ ನಿಧನರಾಗಿದ್ದು, ಮೃತರ ದೇಹವನ್ನು ಇಂದು ಬೆ.10.30ಕ್ಕೆ ದಾವಣಗೆರೆಯ ಜೆಜೆಎಂಸಿ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೌದು, ತರಳಬಾಳು ಬಡಾವಣೆಯಲ್ಲಿ ವಾಸವಿದ್ದ ಮೃತ ಮಾಜಿ ಎಂಎಲ್ಸಿ ಮುದೇಗೌಡ್ರ ವೀರಭದ್ರಪ್ಪ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಇನ್ನು, ಬಿಎ ಪದವೀಧರರಾಗಿದ್ದ ಮುದೇಗೌಡ್ರ ವೀರಭದ್ರಪ್ಪ ಅವರು 1988ರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಗೆ ಚುನಾಯಿತರಾಗಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಮಂಗಳೂರಿನಿಂದ ಪದವೀಧರ ಕ್ಷೇತ್ರದ ಚುನಾವಣೆಗೂ ಸ್ಪರ್ಧಿಸಿದ್ದರು. ದಾವಣಗೆರೆಯಲ್ಲಿ ಪಿಜಿ ಸೆಂಟರ್ ಮತ್ತು ನೂತನ ವಿವಿ ಸ್ಥಾಪನೆಗೆ ಇವರೇ ಕಾರಣಕರ್ತರೂ ಆಗಿದ್ದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.