ಇತ್ತೀಚಿಗೆ ವಾಟ್ಸಾಪ್ ಹಲವಾರು ಹೊಸ ಫೀಚರ್ಸ್ ಗಳನ್ನು ಪರಿಚಯಿಸಿದ್ದು, ವಾಟ್ಸಾಪ್ ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಮತ್ತು ಅವರಿಗೆ ಮೆಸೇಜ್ ಮಾಡುವುದು ಹೇಗೆ ಎಂದು ತಿಳಿಯಬಹುದು.
ನಿಮ್ಮ ವಾಟ್ಸಪ್ ನ ಮೇಲಿರುವ 3 ಡಾಟ್ ಮೇಲೆ ಕ್ಲಿಕ್ ಮಾಡಿ. ಈಗ ಗ್ರೂಪ್ ತೆರೆಯುವ ಅವಕಾಶ ಸಿಗುತ್ತದೆ. ನೀವಿಲ್ಲಿ ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಬ್ಲಾಕ್ ಮಾಡಿದವರ ನಂಬರ್ ಅನ್ನು ಸಹ ಸೇರಿಸಿಕೊಳ್ಳಬಹುದು.
ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ. ನೀವು ತೆಗೆದುಕೊಂಡ ನಂಬರ್ ಮೇಲೆ ಕ್ಲಿಕ್ ಮಾಡಿ ಕ್ರಿಯೇಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ. ಕ್ರಿಯೇಟ್ ಆದ ಗ್ರೂಪ್‌ಗೆ ನೀವು ತೆಗೆದುಕೊಂಡ ನಂಬರ್ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದರ್ಥ.
ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ?
ವಾಟ್ಸಾಪ್ ಸೆಟ್ಟಿಂಗ್‌ಗೆ ತೆರಳಿ ನಿಮ್ಮ ಅಕೌಂಟ್ ಡಿಲೀಟ್ ಮಾಡಿ. ಫೋನ್ ರಿಸ್ಟಾರ್ಟ್ ಮಾಡಿ.
ಈಗ ಪ್ಲೇ ಸ್ಟೋರ್‌ನಿಂದ ವಾಟ್ಸಾಪ್ ಅನ್ನು ರಿ ಇನ್‌ಸ್ಟಾಲ್ ಮಾಡಿ. ನಿಮ್ಮ ಮೊಬೈಲ್ ನಂಬರ್, ಒಟಿಪಿ ಎಂಟರ್ ಮಾಡಿ, ಉಳಿದ ಪ್ರೊಸೀಜರ್ ಫಾಲೋ ಮಾಡಿ. ಬ್ಯಾಕ್ ಆ್ಯಪ್‌ಗಳನ್ನು ರಿಸ್ಟೋರ್ ಮಾಡಬೇಡಿ.
ನೀವು ಹೊಸ ವಾಟ್ಸಾಪ್‌ಗೆ ಕಾಲಿಟ್ಟ ಸಂದರ್ಭ ನಿಮ್ಮ ನಂಬರ್ ಅನ್ ಬ್ಲಾಕ್ ಆಗಿರುತ್ತದೆ. ಈಗ ನೀವು ಇತರರಿಗೆ ಮೆಸೇಜ್ ಕಳುಹಿಸಬಹುದು. ಒಂದು ಅನಾನುಕೂಲವೆಂದರೆ, ಗ್ರೂಪ್‌ಗಳಿಂದ ನೀವು ರಿಮೂವ್ ಆಗಿರುತ್ತೀರಿ.
ಇದನ್ನು ಓದಿ: ನೀವು ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಹಾಕಿದರೆ 2 ಲಕ್ಷ ರೂ..! ರಿಸ್ಕ್ ಇಲ್ಲದೆ ದುಪ್ಪಟ್ಟು ಹಣ ಪಡೆಯಿರಿ..!