ಇಂದೋರ್: ಮಾಜಿ ಕ್ರಿಕೆಟಿಗ ಮನೋಹರ್ ಶರ್ಮಾ (80) ಅವರು ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.
ಮಹಾಮಾರಿಗೆ ತುತ್ತಾಗಿದ್ದ ಮಾಜಿ ಕ್ರಿಕೆಟಿಗ ಮನೋಹರ್ ಶರ್ಮಾ ಅವರು ಚಿಕಿತ್ಸೆ ಫಲಿಸದೆ ಇಂದೋರ್ ನಲ್ಲಿ ನಿಧನರಾಗಿದ್ದಾರೆ. ಮೃತ ಮನೋಹರ್ ಶರ್ಮಾ ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಶರ್ಮಾ ಅವರ ಮಗ ಪಂಕಜ್ ಶರ್ಮಾ ಸೈನ್ಯದಲ್ಲಿ ಕರ್ನಲ್ ಆಗಿದ್ದಾರೆ.
ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸಿದ್ದ ಮನೋಹರ್ ಶರ್ಮಾ ಅವರು, ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯವನ್ನು ಪ್ರತಿನಿಧಿಸಿದ್ದರು. ಮನೋಹರ್ ಶರ್ಮಾ ಅವರ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.