ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಇಂದು ಕೊನೆಯ ದಿನವಾಗಿದ್ದು, ಈಗಲೇ ಲಿಂಕ್ ಮಾಡಿ.
ಲಿಂಕ್ ಮಾಡಲು ನೋಂದಾಯಿತ ಫೋನ್ ಸಂಖ್ಯೆಯಿಂದ UIDAIPAN ಎಂದು ಟೈಪ್ ಮಾಡಿ & ಆಧಾರ್ ಸಂಖ್ಯೆಯನ್ನು ನಮೂದಿಸಿ ಸ್ಪೇಸ್ ಕೊಟ್ಟು ಪ್ಯಾನ್ ಸಂಖ್ಯೆಯನ್ನು ನಮೂದಿಸಿ 567678 ಅಥವಾ 56161 ಗೆ ಸಂದೇಶ ಕಳುಹಿಸಿ.
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಮೂಲಕ ಪ್ಯಾನ್-ಆಧಾರ್’ ಲಿಂಕ್ ಮಾಡುವುದು ಹೇಗೆ?
* ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಗೆ Https: //www.incometaxindiaefiling.gov.in/home ಭೇಟಿ ನೀಡಿ.
* ಪುಟದ ಎಡಭಾಗದಲ್ಲಿ ‘ಕ್ವಿಕ್ ಲಿಂಕ್’ ಅಡಿಯಲ್ಲಿ ‘ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ ಪ್ಯಾನ್, ಆಧಾರ್ ಸಂಖ್ಯೆ & ಹೆಸರು ನಮೂದಿಸಿ.
* ಆಧಾರ್ ಕಾರ್ಡ್ ನಲ್ಲಿನ ಹುಟ್ಟಿದ ವರ್ಷವನ್ನು ಉಲ್ಲೇಖಿಸಲು ಚೌಕದ ಮೇಲೆ ಕ್ಲಿಕ್ ಮಾಡಿ.
* ಈಗ ಕ್ಯಾಪ್ಚಾ ಕೋಡ್ ನಮೂದಿಸಿ. ಕ್ಯಾಪ್ಚಾ ಕೋಡ್ ಬದಲು ಒಟಿಪಿ ವಿನಂತಿ ಕಳುಹಿಸಬಹುದು. ಒಟಿಪಿ ನಿಮ್ಮ ಮೊಬೈಲ್ ನಂಬರ್ ಗೆ ಬರುತ್ತದೆ.
* ಈಗ ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ.
ಕೆಳಗಿನ ಸೈಟ್‌ಗಳ ಮೂಲಕವೂ ಪ್ಯಾನ್-ಆಧಾರ್’ ಲಿಂಕ್ ಮಾಡಿ.
Https: //www.utiitsl.com
Https: //www.egov-nsdl.co.in