ತಿಕೋಟಾ : ಹೊನವಾಡದ ಒಂದಿಂಚು ರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶೆಯೇ ಇಲ್ಲ ಈಗಾಗಲೇ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಮೋದಿಯು ಇದಕ್ಕೊಂದು ಇತಿಶ್ರೀ ಹಾಡಿಯಾಗಿದೆ ಯಾರು ಭಯ ಪಡುವ ಅಗತ್ಯವೇ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿದರು
ಹೌದು, ನಿನ್ನೆ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮಕ್ಕೆ ರಾಜ್ಯ ತಂಡ ಭೇಟಿ ನೀಡಿತು ಈ ತಂಡಕ್ಕೆ ಗ್ರಾಮಸ್ಥರು ಮನವಿ ಪತ್ರವನ್ನು ನೀಡಲಾಯಿತು.
ಹೊನವಾಡ ಗ್ರಾಮದ ಸುಮಾರು 1470 ಎಕರೆ ಸಾಗುವಳಿ ಹೊಲವು ವಕ್ಪಗೆ ಸೇರಿಸಲಾಗುತ್ತದೆ ಇದನ್ನು ಸರಿಪಡಿಸಬೇಕು ಉಸ್ತುವಾರಿ ಸಚಿವರು ಸರಿಯಾದ ಮಾಹಿತಿ ನೀಡುತ್ತಿಲ್ಲ ಇದಕ್ಕೆ ಕಾಂಗ್ರೆಸ್ ಸರಕಾರದ ಕೈವಾಡವಿದೆ ಮುಸ್ಲಿಂಮರು ಕೂಡ ಸಹೋದರತೆಯಿಂದ ಇರಬೇಕು ಎಂದು ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ ಮಾತನಾಡಿದರು.
ಇದನ್ನೂ ಓದಿ: Life insurance : ಜೀವ ವಿಮೆ ಏಕೆ ಮುಖ್ಯ? ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಈ ದೇಶದಲ್ಲಿ ಕಾಂಗ್ರೆಸ್ ಬಹಳಷ್ಟು ಹತಾಷೆಗೊಂಡಿದೆ ಆ ನಾಯಕರ ಮುಖಂಡರ ಡಿ ಎನ್ ಎಯನ್ನು ತಿಳಿದುಕೊಳ್ಳಬೇಕಾಗಿದೆ
ನಾವು ಹಿಂದೂಗಳು ಹಿಂದೂ ಸಮಾಜ ಒಂದಾಗಬೇಕಾಗಿದೆ ಹಿಂದೂಗಳು ಜಾಗೃತಗೊಳ್ಳಬೇಕಾಗಿದೆ ಮುಸ್ಲಿಂಮರು ಹಿಂದೂಗಳ ಭೂಮಿಯನ್ನು ತೆಗೆದುಕೊಳ್ಳುವುದಿಲ್ಲ ಇದು ಅವರ ಪ್ರಕಾರ ಹರಾಮ್ ಆಗಿದೆ ಹಿಂದೂಗಳು ಕೂಡ ತಂದೆ ತಾಯಿಯು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕೆಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಹೇಳಿದರು
ಈ ಸಮಯದಲ್ಲಿ ವೇದಿಕೆಯ ಮೇಲೆ ಹುಬ್ಬಳ್ಳಿಯ ಶಾಸಕ ಮಹೇಶ್ ಟೆಂಗಿನಕಾಯಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪುರ್ ಸಂಜಯ್ ಪಾಟೀಲ ಕನಮಡಿ ಗುರುಲಿಂಗಪ್ಪ ಅಂಗಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಲ್ಮುರುಡಪ್ಪಾ ಹಿರಿಯರಾದ ಮಾಳಪ್ಪ ಗುಗ್ಗರಿ ಲಿಂಗರಾಜ್ ಪಾಟೀಲ್ ಚನ್ನಪ್ಪ ಕೋಟಿ ಆನಂದ ಕೋರಬು ಗೋವಿಂದ ರಜಪೂತ ರಾಜಕುಮಾರ ತಿವಾರಿ ತುಕಾರಾಮ ನಲವಡೆ ಮತ್ತಿತರರು ಇದ್ದರು.