T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡ ದೊಡ್ಡ ಆಘಾತಕ್ಕೀಡಾಗಿದೆ. ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದು, ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಮತ್ತು T20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.
ಇನ್ನು, ವಿಶ್ವಕಪ್‍ಗೆ ತಂಡವನ್ನು ಪ್ರಕಟಿಸಿದ ಕೆಲವೇ ಗಂಟೆಗಳ ನಂತರ ಈ ಸುದ್ದಿ ಬಂದಿದ್ದು, ಜೇಸನ್ ರಾಯ್ ಕೂಡ ಗಾಯಗೊಂಡಿದ್ದು, ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.
T20 ವಿಶ್ವಕಪ್ 2022ರ ಟೂರ್ನಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡ ಹೀಗಿದೆ.
ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ (ಉಪನಾಯಕ), ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರನ್, ಬೆನ್ ಡಕೆಟ್, ಲಿಯಾಮ್ ಡಾಸನ್, ರಿಚರ್ಡ್ ಗ್ಲೀಸನ್, ಟಾಮ್ ಹೆಲ್ಮ್, ವಿಲ್ ಜ್ಯಾಕ್ಸ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಓಲಿ ಸ್ಟೋನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲ್ಯೂಕ್ವುಡ್, ಮಾರ್ಕ್ವುಡ್




