Gold at Home | ನಿಮ್ಮ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ?

Gold at Home : ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಸ೦ಪ್ರದಾಯದ ಭಾಗವೂ ಹೌದು. ಹೆಚ್ಚಿನ ಕುಟುಂಬಗಳಲ್ಲಿ ಚಿನ್ನವನ್ನು ಸಂಪತ್ತಿನ ರೂಪದಲ್ಲಿ ಇಡಲಾಗುತ್ತದೆ. ಕೆಲವರು ಹೂಡಿಕೆಯಾಗಿಯೂ ಬಳಸುತ್ತಾರೆ. ಚಿನ್ನವನ್ನು ಆಭರಣ ನಾಣ್ಯಗಳು, ಬಾರ್‌ಗಳು ಅಥವಾ…

Gold at Home

Gold at Home : ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಸ೦ಪ್ರದಾಯದ ಭಾಗವೂ ಹೌದು. ಹೆಚ್ಚಿನ ಕುಟುಂಬಗಳಲ್ಲಿ ಚಿನ್ನವನ್ನು ಸಂಪತ್ತಿನ ರೂಪದಲ್ಲಿ ಇಡಲಾಗುತ್ತದೆ. ಕೆಲವರು ಹೂಡಿಕೆಯಾಗಿಯೂ ಬಳಸುತ್ತಾರೆ. ಚಿನ್ನವನ್ನು ಆಭರಣ ನಾಣ್ಯಗಳು, ಬಾರ್‌ಗಳು ಅಥವಾ ಸಾರ್ವಭೌಮ ಚಿನ್ನದ ಬಾಂಡ್‌ಗಳ ರೂಪದಲ್ಲಿ ಸಂಗ್ರಹಿಸುತ್ತಾರೆ. ಆದರೆ, ಮನೆಯಲ್ಲಿ ಚಿನ್ನ ಇಡುವಾಗ ಕೆಲವು ನಿಯಮಗಳನ್ನು ತಿಳಿದಿರಬೇಕು.

ತೆರಿಗೆ ಮಂಡಳಿ ನಿಯಮ

ಭಾರತ ಸರ್ಕಾರವು ಚಿನ್ನದ ಮಿತಿಗಳ ಬಗ್ಗೆ ಕೆಲವು ನಿಯಮಗಳನ್ನು ನಿಗದಿಪಡಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಪ್ರಕಾರ, ನೀವು ಇಟ್ಟಿರುವ ಚಿನ್ನಕ್ಕೆ ಸರಿಯಾದ ದಾಖಲೆಗಳು ಬೇಕು. ಒ೦ದು ವೇಳೆ ತನಿಖೆ ನಡೆದರೆ, ಚಿನ್ನವನ್ನು ಹೇಗೆ ಪಡೆದಿದ್ದೀರಿ ಎಂಬುದಕ್ಕೆ ಪುರಾವೆ ತೋರಿಸಬೇಕಾಗುತ್ತದೆ.

ಮಿತಿ ಎಷ್ಟು?

  • ಅವಿವಾಹಿತ ಮಹಿಳೆಯರು: 250 ಗ್ರಾಂ
  • ಅವಿವಾಹಿತ ಪುರುಷರು: 100 ಗ್ರಾಂ
  • ವಿವಾಹಿತ ಮಹಿಳೆಯರು: 500 ಗ್ರಾಂ
  • ವಿವಾಹಿತ ಪುರುಷರು: 100 ಗ್ರಾಂ

ದಾಖಲೆ ಅಗತ್ಯ

ನೀವು ಚಿನ್ನವನ್ನು ಖರೀದಿಸಿದ್ದರೆ, ಅದಕ್ಕೆ ಆದಾಯದ ಮೂಲವನ್ನು ತೋರಿಸಬೇಕು. ಆದರೆ ಚಿನ್ನವನ್ನು ಆನುವಂಶಿಕವಾಗಿ ಪಡೆದಿದ್ದರೆ, ಅದಕ್ಕೆ ಯಾವುದೇತೆರಿಗೆ ಇರುವುದಿಲ್ಲ. ಒಂದು ವೇಳೆ ತನಿಖೆಯಾದರೆ, ನಿಮ್ಮ ಚಿನ್ನವು ಮಿತಿಯೊಳಗಿದ್ದರೆ, ಅದನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದ, ಚಿನ್ನದ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳುವುದು ಮುಖ್ಯ.

Vijayaprabha Mobile App free

ತೆರಿಗೆ ನಿಯಮ

ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವುದಕ್ಕೆ ಯಾವುದೇ ತೆರಿಗೆ ಇಲ್ಲ. ಆದರೆ, ಚಿನ್ನವನ್ನು ಮಾರಾಟ ಮಾಡಿದಾಗ ಲಾಭ ಬಂದರೆ, ತೆರಿಗೆ ಇರಬಹುದಾಗಿದ್ದು, ಇದು ಚಿನ್ನವನ್ನು ನೀವು ಎಷ್ಟು ಕಾಲದಿಂದ ಇಟ್ಟುಕೊ೦ಡಿದ್ದೀರಿ ಎ೦ಬುದರ ಮೇಲೆ ಅವಲಂಬಿತವಾಗಿರುತ್ತದೆ.

ಡಿಜಿಟಲ್ ಚಿನ್ನ

ಕಾನೂನಿನ ಪ್ರಕಾರ, ಡಿಜಿಟಲ್ ಚಿನ್ನ ಖರೀದಿಸಲು ಯಾವುದೇ ಗರಿಷ್ಠ ಮಿತಿಯಿಲ್ಲ. ಡಿಜಿಟಲ್ ಚಿನ್ನದ ಖರೀದಿಗೆ ಜನರು ದಿನಕ್ಕೆ 2 ಲಕ್ಷದವರೆಗೆ ಖರ್ಚು ಮಾಡಬಹುದು. ಅಲ್ಲದೆ, 3 ವರ್ಷಗಳಿಗಿಂತ ಕಡಿಮೆ ಅವಧಿಗೆ ಹೊಂದಿರುವ ಡಿಜಿಟಲ್ ಚಿನ್ನದ ಮೇಲೆ ಯಾವುದೇ ಅಲ್ಪಾವಧಿಯ ಲಾಭದ ತೆರಿಗೆ ಇರುವುದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.