BPL Ration Card: BPL ಕಾರ್ಡ್ ನೀರಿಕ್ಷೆಯಲ್ಲಿ ಇದ್ದವರಿಗೆ ಜೂನ್ 1 ರಿಂದ ಹೊಸ ಅರ್ಜಿ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ

BPL Ration Card BPL Ration Card

BPL Ration Card: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡುವ ಆಶ್ವಾಸನೆಯನ್ನು ನೀಡಿದ ಕಾಂಗ್ರೆಸ್‌ ಸರ್ಕಾರ ಇವುಗಳನ್ನು ಜಾರಿಗೆ ತರಲು ಮುಂದಾಗಿದೆ. ಹೌದು, ಈ ಎಲ್ಲಾ ಆಶ್ವಾಸನೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರವು ಮುಂದಾಗಿದ್ದು, ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಇವೆಲ್ಲವನ್ನೂ ಜಾರಿಗೆ ತರಲು ಸರ್ಕಾರ ಘೋಷಣೆ ಮಾಡಿದೆ.

ಇದನ್ನು ಓದಿ: ಗ್ಯಾರಂಟಿ ಯೋಜನೆ ಲಾಭಕ್ಕಾಗಿ ಬಿಪಿಎಲ್ ಕಾರ್ಡ್​ಗೆ ಮುಗಿಬಿದ್ದ ಜನರು; ಬಿಗ್ ಶಾಕ್ ನೀಡಿದ ಆಹಾರ ಇಲಾಖೆ!

ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದು, ಈ ಎಲ್ಲಾ ಐದು ಗ್ಯಾರೆಂಟಿ ಯೋಜನೆಗಳಿಗೆ ಮುಖ್ಯವಾಗಿ ಬಿಪಿಎಲ್‌ ರೇಷನ್‌ ಕಾರ್ಡ್ (BPL Ration Card) ಬೇಕಾಗಿದ್ದು, ಈ ಯೋಜನೆಗಳ ಲಾಭ ಪಡೆಯಲು ಬಿಪಿಎಲ್‌ ರೇಷನ್‌ ಕಾರ್ಡ್‌ಗೆ ಜನರು ಮುಗಿ ಬಿದ್ದಿದ್ದಾರೆ.

Advertisement

ಇದನ್ನು ಓದಿ: ಜಿಯೋದಿಂದ ಹೊಸ ಬ್ರಾಡ್‌ಬ್ಯಾಂಡ್ ಯೋಜನೆ, ಕೇವಲ ರೂ.1200ಕ್ಕೆ 3 ತಿಂಗಳ ಇಂಟರ್ನೆಟ್!

ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಪಡಿತರ ಚೀಟಿ ಮಾಡಿಸಲು ಎಲ್ಲಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಡ್‌ ಮಾಡಿಸಲು ಮುಂದಾಗಿದ್ದು, ಹೆಚ್ಚು ಜನ ಒಂದೇ ಸರಿ ಕಾರ್ಡ್‌ ಮಾಡಿಸಲು ಹೋಗಿರುವುದರಿಂದ ವೆಬ್ಸೈಟ್‌ ನಿಧಾನವಾಗಿದ್ದು, ಕೆಲವೆಡೆ ಓಪನ್‌ ಕೂಡ ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮನಗಂಡ ಆಹಾರ ಇಲಾಖೆ ಹೊಸ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

BPL Ration Card ನಿರೀಕ್ಷೆಯಲ್ಲಿ ಇದ್ದವರಿಗೆ ಭರ್ಜರಿ ಸಿಹಿಸುದ್ದಿ

BPL card with money
BPL Ration Card

ಹೊಸ ಪಡಿತರ ಚೀಟಿಗಾಗಿ ಅರ್ಜಿ ಪ್ರಕ್ರಿಯೆಯನ್ನೇ ಆಹಾರ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ, ಸರ್ಕಾರದ ಉಚಿತ ಕೊಡುಗೆಗಳನ್ನು ಪಡೆಯಲು ಮುಂದಾಗಿದ್ದ ಕೆಲವು ಜನರಿಗೆ ನಿರಾಶೆಯಾಗಿತ್ತು. ಆದರೆ, ಬಿಪಿಎಲ್ ಕಾರ್ಡ್ (BPL Ration Card) ನಿರೀಕ್ಷೆಯಲ್ಲಿ ಇದ್ದವರಿಗೆ ಇದೀಗ ಹೊಸ ಸುದ್ದಿ ಒಂದು ಹೊರ ಬಿದ್ದಿದ್ದು, ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಜೂನ್ 1 ರಿಂದ ಅವಕಾಶ ಕಲ್ಪಿಸಲು ಆಹಾರ ಇಲಾಖೆ ತೀರ್ಮಾನ ಮಾಡಿದೆ ಎನ್ನಲಾಗಿದೆ.

ಇದನ್ನು ಓದಿ: ನಿಮಗೆ ಪಿಎಂ ಕಿಸಾನ್ 14 ನೇ ಕಂತಿನ ಹಣ ಬೇಕಾದರೆ ಈ ರೀತಿ ಮಾಡಿ..!

ಹೌದು, ಜೂನ್ 1ರಿಂದ ಆದ್ಯತಾ ಕುಟುಂಬಗಳ ಬಡತನ ರೇಖೆಗಿಂತ ಕೆಳಗಿರುವವರು ಬಿಪಿಎಲ್ ಪಡಿತರ ಚೀಟಿ (BPL Ration Card) ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದ ಮತ್ತು ಮಂಜೂರಾದ ಪಡಿತರ ಚೀಟಿಗಳ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.

ಇದನ್ನು ಓದಿ: ನಿಮ್ಮ PF ಖಾತೆಯಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನವೀಕರಿಸಿಲ್ಲವೇ..? ಹೀಗೆ ಮಾಡಿ

ಬಿಪಿಎಲ್ ಕಾರ್ಡ್ (BPL Ration Card) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ration-card-vijayaprabha-news
BPL Ration Card Apply
  • ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್‌ ಭೇಟಿ ನೀಡಿ ಹೋಗಿ, ಇ-ಸೇವೆಗಳು’ (E Service) ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ.
  • ಇ-ರೇಷನ್ ಕಾರ್ಡ್‌ನಿಂದ ಹೊಸ ಪಡಿತರ ಚೀಟಿಯನ್ನು (New Ration card) ಆಯ್ಕೆ ಮಾಡಿ, “ಹೊಸ ಪಡಿತರ ಚೀಟಿ ವಿನಂತಿ” (New ration card request) ಮೇಲೆ ಕ್ಲಿಕ್ ಮಾಡಿ
  • ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಬಲಭಾಗದಲ್ಲಿ ತೆರೆಯುತ್ತದೆ. ನಂತರ ಹೊಸ ಪಡಿತರ ಚೀಟಿ ವಿನಂತಿಯ (New ration card request) ಮೇಲೆ ಕ್ಲಿಕ್ ಮಾಡಿ.
  • ನಂತರ ಬಿಪಿಎಲ್ ಕಾರ್ಡ್ ಗೆ(BPL Card) ಅರ್ಜಿ ಸಲ್ಲಿಸಲು ಆದ್ಯತಾ ಹೌಸ್‌ಹೋಲ್ಡ್ (PHH) ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಹೋಗಿ(GO) ಬಟನ್ ಅನ್ನು ಕ್ಲಿಕ್ ಮಾಡಿ.
  • ನಂತರ OTP ಅಥವಾ ಫಿಂಗರ್‌ಪ್ರಿಂಟ್ (Fingerprint) ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಬೇಕು.
  • ಅರ್ಜಿದಾರರು OTP ಅನ್ನು ಆಯ್ಕೆ ಮಾಡಿದರೆ, ನೋಂದಾಯಿತ ಮೊಬೈಲ್ ಫೋನ್‌ಗೆ SMS ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ ‘ಹೋಗಿ'(GO) ಕ್ಲಿಕ್ ಮಾಡಬೇಕು.
  • ಯಶಸ್ವಿ ಪರಿಶೀಲನೆಯ ನಂತರ ಆಧಾರ್ ಡೇಟಾವನ್ನು (Adhar details) ತೋರಿಸಲಾಗುತ್ತದೆ. ನಂತರ “ಸೇರಿಸು” (Add) ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಸಂಖ್ಯೆಯನ್ನು ಉತ್ಪಾದಿಸಲಾಗುತ್ತದೆ.
  • ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು
  • ಪೂರ್ಣಗೊಳಿಸಿದ ನಂತರ ನಿಮ್ಮ ಅರ್ಜಿಯನ್ನು ಕಳುಹಿಸಲು “ಸಲ್ಲಿಸು”(Submit) ಮೇಲೆ ಕ್ಲಿಕ್ ಮಾಡಿ ಅರ್ಜಿ ಪೂರ್ಣಗೊಳಿಸಬೇಕು.

ಇದನ್ನು ಓದಿ: ಸರ್ಕಾರದಿಂದ ಉಚಿತ ವಿದ್ಯುತ್‌, 2000ರೂ ನೀಡಲು ಡೇಟ್‌ ಫಿಕ್ಸ್‌

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement