ಬಿಎಸ್ಎನ್ಎಲ್, ಏರ್‌ಟೆಲ್, ಜಿಯೋ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಆಫರ್ ನೀಡಿದ್ದು, ಹೊಸ ಪ್ಲಾನ್ ಗಳನ್ನು ಹೊರ ತಂದಿವೆ.
ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿರುವ ಬಿಎಸ್ಎನ್ಎಲ್, ಹೊಸ ಬ್ರಾಡ್‌ಬ್ಯಾಂಡ್ ಅಥವಾ ಲ್ಯಾಂಡ್‌ಲೈನ್ ಸಂಪರ್ಕವನ್ನು ಪಡೆಯಲು ನೀವು ಇನ್ಸ್ಟಾಲೇಷನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಪ್ರಕಟಿಸಿದೆ.
ಬಿಎಸ್ಎನ್ಎಲ್ ಸಾಮಾನ್ಯವಾಗಿ ಹೊಸ ಸಂಪರ್ಕಕ್ಕಾಗಿ ಬಳಕೆದಾರರಿಗೆ 250 ರೂ. ಚಾರ್ಜ್ ವಿಧಿಸುತ್ತಿದೆ. ಈಗ ಈ ಮೊತ್ತವನ್ನು ಕಟ್ಟುವ ಅವಶ್ಯಕತೆಯಿಲ್ಲ. ಈ ಆಫರ್ ದೇಶಾದ್ಯಂತ ಇರಲಿದ್ದು, ಏಪ್ರಿಲ್ 30, 2021 ರವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಿದೆ.
ಇನ್ನು ಬಿಎಸ್ಎನ್ಎಲ್ ನಿಂದ ಕೇವಲ ₹47ಕ್ಕೆ ಗ್ರಾಹಕರಿಗೆ 1 ದಿನಕ್ಕೆ 1 ಜಿಬಿ ಇಂಟರ್ನೆಟ್, 100 ಎಸ್‌ಎಂಎಸ್ ಮತ್ತು 28 ದಿನಗಳವರೆಗೆ ಅನಿಯಮಿತ ಕರೆ ಸಿಗುತ್ತದೆ.
ಜಿಯೋ ಗ್ರಾಹಕರಿಗೆ ಬಂಪರ್ ಆಫರ್!:
ಗ್ರಾಹಕರನ್ನು ಆಕರ್ಷಿಸಲು ರಿಲಯನ್ಸ್ ಜಿಯೋ ಉತ್ತಮ ಪೋಸ್ಟ್‌ಪೇಯ್ಡ್ ಪ್ಲಾನ್ ಗಳನ್ನು ಹೊರ ತಂದಿದೆ. ಈ ಯೋಜನೆಯಲ್ಲಿ ಗ್ರಾಹಕರು 200 GB ಡೇಟಾ ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.
ಅಷ್ಟೇ ಅಲ್ಲದೆ, ಬಳಕೆದಾರರು ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್‌ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದೆ. ಇದು 599, 799 ಮತ್ತು 999 ರೂ. ಗಳ ಮೂರು ಪ್ಲಾನ್ ಗಳನ್ನು ಒಳಗೊಂಡಿದೆ.
ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್:
ಇನ್ನು ಏರ್‌ಟೆಲ್ ತನ್ನ ಗ್ರಾಹಕರಿಗೆ ₹100ಕ್ಕಿಂತ ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ್ದು, ₹79 ಮತ್ತು ₹49 ಎರಡೂ ಯೋಜನೆಗಳಲ್ಲಿ, ಬಳಕೆದಾರರಿಗೆ ದಿನದಲ್ಲಿ 200MB ಡೇಟಾ, 28 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತಿದೆ.