Bhagyalakshmi yojana : ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು? ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡಲು ನಿಯಮಗಳೇನು?

Bhagyalakshmi yojana : ಕರ್ನಾಟಕ ಸರ್ಕಾರವು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಬಿಎಸ್‌ ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮಕ್ಕಳಿಗೆ ಆರ್ಥಿಕ…

bhagyalakshmi yojana

Bhagyalakshmi yojana : ಕರ್ನಾಟಕ ಸರ್ಕಾರವು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಬಿಎಸ್‌ ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಮಕ್ಕಳಿಗೆ ಆರ್ಥಿಕ ನೆರವು ನೀಡುವ ಭಾಗ್ಯಲಕ್ಷ್ಮೀ ಯೋಜನೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವೆಂದರೆ ರಾಜ್ಯದಲ್ಲಿ ಗಂಡು ಮತ್ತು ಹೆಣ್ಣು ಮಗುವಿನ ಜನನದ ನಡುವಿನ ತಾರತಮ್ಯವನ್ನು ಕಡಿಮೆ ಮಾಡುವುದು. ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸುವುದು.

ಇದನ್ನೂ ಓದಿ: ಐಆರ್‌ಸಿಟಿಸಿ ರೈಲು ಟಿಕೆಟ್ ಬುಕಿಂಗ್ ಮಾಡಲು ಹೊಸ ರೂಲ್ಸ್‌; ಏನೇನಿದೆ ತಿಳಿದುಕೊಳ್ಳಿ

Vijayaprabha Mobile App free

ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು? (Funds received by beneficiaries of Bhagyalakshmi Yojana)

Bhagyalakshmi Bond
Bhagyalakshmi Bond

 

ಭಾಗ್ಯಲಕ್ಷ್ಮೀ ಯೋಜನೆಗೆ ಮಾರ್ಪಡಿಸಿದ ದಿನಾಂಕ 1-8-2008 ರ ನಂತರ ನೋಂದಣಿಯಾದ ಕುಟುಂಬದ ಮೊದಲ ಮಗುವಿನ ಹೆಸರಿನಲ್ಲಿ 19,300 ರೂಪಾಯಿ ಹಾಗೂ ಎರಡನೇ ಮಗುವಿನ ಹೆಸರಿನಲ್ಲಿ 18,350 ರೂಪಾಯಿ ಮೊತ್ತವನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ವಿತ ಠೇವಣಿಯನ್ನು ಇಡಲಾಗುತ್ತದೆ.

ಆ ಸಂಸ್ಥೆಯು ಬಡ್ಡಿ ಸಮೇತವಾಗಿ 18 ವರ್ಷ ಪೂರ್ಣಗೊಂಡ ಮೊದಲ ಮಗುವಿಗೆ 1,00,097 ರೂಪಾಯಿ ಹಾಗೂ 2ನೇ ಮಗುವಿಗೆ 1,00,052 ರೂಪಾಯಿಗಳನ್ನು ಜಮೆ ಮಾಡಲಿದ್ದು, ಈ ಯೋಜನೆಯ ಸ್ಟೇಟಸ್ ನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಸಿಗಲಿದೆ ಉಚಿತ ಬೋರ್‌ವೆಲ್; ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ?

ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಹಂತಗಳನ್ನು ಅನುಸರಿಸಬೇಕು? (Application for Bhagyalakshmi Yojana)

ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಬಹುದು. ಮೊದಲಿಗೆ, ಭಾಗ್ಯಲಕ್ಷ್ಮಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ವೆಬ್‌ಸೈಟ್‌ನ ಮುಖಪುಟವು ಪರದೆಯ ಮೇಲೆ ತೆರೆಯುತ್ತದೆ.

ಈಗ ಭಾಗ್ಯಲಕ್ಷ್ಮಿ ಯೋಜನೆ ಅರ್ಜಿ ನಮೂನೆಯ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಂತರ ಅರ್ಜಿ ನಮೂನೆಯ ಪಿಡಿಎಫ್ ಪರದೆಯ ಮೇಲೆ ತೆರೆಯುತ್ತದೆ. ಇಲ್ಲಿ ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ. ಅಂತಿಮವಾಗಿ ಫಾರ್ಮ್ ಅನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಲ್ಲಿಸಿ.

ಇದನ್ನೂ ಓದಿ: ಪೊಲೀಸ್‌ ಕುಟುಂಬಕ್ಕೆ ಭರ್ಜರಿ ಗುಡ್‌ನ್ಯೂಸ್‌ ನೀಡಿದ ಸರ್ಕಾರ; ಪೊಲೀಸರ ವಿಮಾ ಮೊತ್ತ ರೂ. 50 ಲಕ್ಷಕ್ಕೆ ಹೆಚ್ಚಳ!

ಸುಕನ್ಯಾ ಸಮೃದ್ಧಿಯಾಗಿ ಬದಲಾಗಿರುವ ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Yojana turned into Sukanya Samriddhi)

ಇನ್ನು, ಭಾಗ್ಯಲಕ್ಷ್ಮೀ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಮೂಲಕ ಮುಂದುವರೆಸಲಾಗಿದೆ. ಎಲ್‌ಐಸಿಯು ಭಾಗ್ಯಲಕ್ಷ್ಮೀ ಬಾಂಡುಗಳ ಮೆಚ್ಯೂರಿಟಿ ನಂತರ ಫಲಾನುಭವಿಗೆ 1 ಲಕ್ಷ ರೂ. ನೀಡಲು ತಕರಾರು ಮಾಡಿದ್ದರಿಂದ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದ್ದು, ಒಂದು ವೇಳೆ ಫಲಾನುಭವಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದರೆ ಆ ಹಣವನ್ನು ವಿತ್‌ ಡ್ರಾ ಮಾಡಿಕೊಳ್ಳಲು ಸುಕನ್ಯಾ ಸಮೃದ್ಧಿಯಲ್ಲಿ ಅವಕಾಶವಿದೆ.

ಇದನ್ನೂ ಓದಿ: ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ ; ಅರ್ಜಿ ಸಲ್ಲಿಕೆ ಹೇಗೆ?

ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡಲು ಇರುವ ನಿಯಮಗಳೇನು? (Rules for drawing Bhagyalakshmi Bond money)

ಭಾಗ್ಯಲಕ್ಷ್ಮೀ ಯೋಜನೆಯಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ಶೀಘ್ರದಲ್ಲೇ 1 ಲಕ್ಷ ರೂ. ಬಾಂಡ್ ಕೊಡುವ ಕಾರ್ಯಕ್ರಮ ನಡೆಯಲಿದೆ. ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರಿಚಯಿಸಿದ ಈ ಯೋಜನೆಯ ಲಾಭ ಇದೀಗ ರಾಜ್ಯದ 2.30 ಲಕ್ಷ ಜನರನ್ನು ತಲುಪಿದೆ. ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡುವುದಕ್ಕೆ ಇರುವ ಕೆಲವು ಮುಖ್ಯ ನಿಯಮಗಳನ್ನು ವಿಡಿಯೋದಲ್ಲಿ ನೋಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.