De-link : ಗ್ರಾಹಕರೇ ನೀವು ಮನೆ ಬದಲಿಸಿದ್ದೀರಾ? ಹಾಗಾದರೆ ನೀವು ಗೃಹಜ್ಯೋತಿ ಹಳೆ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ ಮತ್ತೊಂದು ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗುವ ಮೂಲಕ ಆ ಮನೆಗೆ ಗೃಹಜ್ಯೋತಿ ಯೋಜನೆ ಲಾಭ ಪಡೆದುಕೊಳ್ಳಬಹುದು.
ಹೌದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದು. ಬಾಡಿಗೆ ಮನೆ ಅಥವಾ ಯಾವುದೇ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿ ಮಾಡುವ ಮೂಲಕ ಆ ಮನೆಗೆ ಗೃಹಜ್ಯೋತಿ ಯೋಜನೆಯ ಲಾಭ ಮತ್ತೆ ಪಡೆದುಕೊಳ್ಳಬಹುದು.
ಇದನ್ನೂ ಓದಿ: PF withdrawal rules | ಪಿಎಫ್ ಹಿಂಪಡೆಯಲು ಹೊಸ ನಿಯಮಗಳು; ಇನ್ಮುಂದೆ ಸುಲಭವಾಗಿ ಕ್ಲೈಮ್ ಇತ್ಯರ್ಥ!
De-link ಮಾಡುವುದು ಹೇಗೆ..?
ಡಿ-ಲಿಂಕ್ ಮಾಡಲು ಮೊದಲು ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಿ. ಅಲ್ಲಿ ಗೃಹಜ್ಯೋತಿ ಯೋಜನೆ ಕ್ಲಿಕ್ ಮಾಡಿ ನಿಮ್ಮ ಹಳೆಯ ಆರ್‌ಆರ್ ಸಂಖ್ಯೆಗೆ ಲಿಂಕ್ ಮಾಡಲಾದ ಆಧಾರ್ ಸಂಖ್ಯೆಯನ್ನು ಒತ್ತಿ.ನಂತರ ಒಟಿಪಿಯನ್ನು ನಮೂದಿಸಿ. ಆನಂತರ ಅಲ್ಲಿ ನೀಡಲಾದ ಮಾಹಿತಿಯನ್ನು ಭರ್ತಿ ಮಾಡಿ. ಹೀಗೆ ಮಾಡಿದರೆ ಡಿ ಲಿಂಕ್ ಆಗುತ್ತದೆ. ನಂತರ ಹೊಸ ಮನೆಯ ಆರ್‌ಆರ್ ನಂಬರ್ ನೀಡಿ ಭರ್ತಿ ಮಾಡಿದರೆ, ಗೃಹ ಜ್ಯೋತಿಯ ನಿಮ್ಮ ಖಾತೆ ಅಪ್ಡೇಟ್ ಆಗಲಿದೆ.
ಇದನ್ನೂ ಓದಿ: EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?
ಗೃಹ ಜ್ಯೋತಿ ಯೋಜನೆಯಿಂದ ಕರ್ನಾಟಕದ ಬಡ ಜನರಿಗೆ ಲಾಭ!
ರಾಜ್ಯದ 1.56 ಕೋಟಿ ಜನರು ಗೃಹ ಜ್ಯೋತಿ ಯೋಜನೆಯ ಲಾಭ ಪಡೆದಿದ್ದು, ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು, ವಿದ್ಯುತ್ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್ ಫೀ, ಹಿರಿಯರ ಔಷಧೋಪಚಾರಕ್ಕೆ, ಮತ್ತಿತರ ಮನೆ ಖರ್ಚು ವೆಚ್ಚಗಳಗೆ ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು 200 ಯೂನಿಟ್ ದಾಟಿದರೆ ಅವರು ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿ ಮಾಡಬೇಕಾಗುತ್ತದೆ.