ಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನ

ಬೆಳಗಾವಿ: ತಾಯಿ ಪಡೆದಿದ್ದ ₹50,000 ಸಾಲ ತೀರಿಸಲು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಓರ್ವ ಯುವಕ ಮತ್ತು ಆತನ ತಾಯಿಯನ್ನು ಬೆಳಗಾವಿ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬದ…

ಬೆಳಗಾವಿ: ತಾಯಿ ಪಡೆದಿದ್ದ ₹50,000 ಸಾಲ ತೀರಿಸಲು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಓರ್ವ ಯುವಕ ಮತ್ತು ಆತನ ತಾಯಿಯನ್ನು ಬೆಳಗಾವಿ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬದ ಇತರ ಇಬ್ಬರು ಸದಸ್ಯರು ತಲೆಮರೆಸಿಕೊಂಡಿದ್ದಾರೆ.

ವಡ್ಗಾಂವ್ನ ಮಂಗೈ ನಗರದ ನಿವಾಸಿಗಳಾದ ವಿಶಾಲ್ ಪುಂಡಲಿಕ್ ಧವಾಲಿ (22) ಮತ್ತು ಆತನ ತಾಯಿ ರೇಖಾ ಪುಂಡಲಿಕ್ ಧವಾಲಿ ಅವರನ್ನು 17 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ವಿಶಾಲ್ ಅವರ ತಂದೆ ಮತ್ತು ಸಹೋದರನ ಹೆಸರನ್ನೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಮೂಲತಃ ಸೌಂದತ್ತಿ ತಾಲ್ಲೂಕಿನವಳಾಗಿದ್ದ ಸಂತ್ರಸ್ತೆ, ತನ್ನ ತಂದೆಯ ಮರಣದ ನಂತರ ತನ್ನ ತಾಯಿಯೊಂದಿಗೆ ಬೆಳಗಾವಿಗೆ ಸ್ಥಳಾಂತರಗೊಂಡಿದ್ದಳು. ಇವರಿಬ್ಬರು ಆರ್ಥಿಕ ಸಂಕಷ್ಟದಲ್ಲಿದ್ದ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು. ಈ ವೇಳೆ ಸಂತ್ರಸ್ತೆಯ ತಾಯಿ, ಆಕೆಯ ಚಿನ್ನದ ಕಿವಿಯೋಲೆಗಳನ್ನು ಅಡವಿಟ್ಟು, ಗ್ರಾಮದ ರೇಖಾ ಅವರಿಂದ 50,000 ರೂಪಾಯಿಗಳನ್ನು ಸಾಲ ಪಡೆದಿದ್ದರು.

Vijayaprabha Mobile App free

ಒಪ್ಪಿದ ಸಮಯದೊಳಗೆ ಸಾಲವನ್ನು ಮರುಪಾವತಿಸಲು ತಾಯಿಗೆ ಸಾಧ್ಯವಾಗದಿದ್ದಾಗ, ರೇಖಾ ಆಕೆಯ ಮಗಳನ್ನು ತನ್ನ ಮಗ ವಿಶಾಲ್‌ನಿಗೆ ಮದುವೆ ಮಾಡುವಂತೆ ಒತ್ತಡ ಹೇರಲು ಪ್ರಾರಂಭಿಸಿದಳು ಎಂದು ಆರೋಪಿಸಲಾಗಿದೆ. ಸಾಲವನ್ನು ಮರುಪಾವತಿಸುವುದಾಗಿ ಪದೇ ಪದೇ ಭರವಸೆ ನೀಡಿದ್ದರೂ, ರೇಖಾ ಮತ್ತು ವಿಶಾಲ್ ಆಕೆಯ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದ್ದರು. 

ಕಳೆದ ಸೆಪ್ಟೆಂಬರ್ 17, 2024 ರಂದು, ಅವರು ವಡ್ಗಾಂವ್ನಿಂದ ಹುಡುಗಿಯನ್ನು ಅಪಹರಿಸಿ ಮರುದಿನ ಅಥಣಿಗೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ. ಅಲ್ಲಿ, ದೇವಾಲಯವೊಂದರಲ್ಲಿ ವಿಶಾಲ್ಗೆ ಬಲವಂತವಾಗಿ ಮದುವೆ ಮಾಡಿಕೊಡಲಾಯಿತು.

ಇದಾದ ಏಳು ತಿಂಗಳ ಬಳಿಕ, ಜನವರಿ 17, 2025 ರಂದು ಯುವತಿ ಧೈರ್ಯ ಮಾಡಿ ಪೊಲೀಸರನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಇನ್ಸ್ಪೆಕ್ಟರ್ ಪರಶುರಾಮ್ ಪೂಜಾರಿ, ವಿಶಾಲ್ ಮತ್ತು ರೇಖಾ ಅವರನ್ನು ಬಂಧಿಸಿದರು, ಉಳಿದವರನ್ನು ಬಂಧಿಸಲು ಬಲೆ ಬೀಸಿದ್ದಾರೆ. 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.