PM Internship Scheme: ಯುವಕರಿಗೆ ಕೌಶಲ್ಯಗಳನ್ನು ಕಲಿಸುವ ಮೂಲಕ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಪಿಎಂ ಇಂಟರ್ನ್‌ಶಿಪ್ ಯೋಜನೆಯನ್ನು ಪ್ರಾರಂಭಿಸಿದ್ದು,ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಯೋಜನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಒಂದು ವರ್ಷದವರೆಗೆ ಇಂಟರ್ನ್‌ಶಿಪ್ ನೀಡಲಾಗುತ್ತದೆ.
PM Internship Scheme : ಅರ್ಜಿ ಸಲ್ಲಿಕೆ ಆರಂಭ; 25 ಕೊನೆ ದಿನ
PM ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಯಾವುದೇ SSLC/ITI, ಡಿಪ್ಲೊಮಾ ಪೂರ್ಣಗೊಳಿಸಿದವರು, ಪದವಿ, ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳು pminternship.mca.gov.in ವೆಬ್‌ಸೈಟ್‌ನಲ್ಲಿ ಈ ತಿಂಗಳ 25 ರ ಮೊದಲು ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದ ಅಗ್ರ 500 ಕಂಪನಿಗಳಲ್ಲಿ ಒಂದರಲ್ಲಿ 12 ತಿಂಗಳ ಇಂಟರ್ನ್‌ಶಿಪ್ ಅವಕಾಶವನ್ನು ನೀಡಲಾಗುತ್ತದೆ. ಒಂದು ಬಾರಿಯ ಅನುದಾನವಾಗಿ 6 ಸಾವಿರ ರೂ. ಹಾಗೂ ಪ್ರತಿ ತಿಂಗಳು 5 ಸಾವಿರ ರೂ. ಸ್ಟೈಫಂಡ್ ನೀಡಲಾಗುವುದು.
ಇದನ್ನೂ ಓದಿ: ತಿರುಪತಿಯಲ್ಲಿ ರೀಲ್ಸ್ ಮಾಡಿದ ವೈಎಸ್‌ಆರ್ ಶಾಸಕರ ಸಂಗಾತಿ ವಿರುದ್ಧ ಪ್ರಕರಣ ದಾಖಲು
PM Internship Scheme : 90,800ಕ್ಕೂ ಹೆಚ್ಚು ಹುದ್ದೆಗಳು
ನಿರುದ್ಯೋಗ ಯುವಕ ಯುವತಿಯರಿಗಾಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಪೋಸ್ಟ್ಗೆ ಅರ್ಜಿಗಳನ್ನು ಆರಂಭಿಸಲಾಗಿದ್ದು, 90,800ಕ್ಕೂ ಅಧಿಕ ಇಂಟರ್ನ್‌ಶಿಪ್‌ಗಳನ್ನು ಪೋಸ್ಟ್ಗಳಿದ್ದು ಅಕ್ಟೋಬರ್ 12 ಸಂಜೆ 5 ಗಂಟೆಯಿಂದ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಯು ಅಧಿಕೃತ ವೆಬ್ಸೈಟ್ https://pminternship.mca.gov.in/login/ಗೆ ಭೇಟಿ ನೀಡಿ ಸ್ವವಿವರವನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು..
ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ನಟ ದರ್ಶನ್ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್ ಅಗತ್ಯವೆಂದು ವೈದ್ಯರ ಸಲಹೆ
ಪಿಎಂ ಇಂಟರ್ನ್‌ಶಿಪ್ ಸ್ಕೀಮ್ಗೆ ಭರ್ಜರಿ ಸ್ಪಂದನೆ
ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಸ್ಕೀಮ್ನ ಪೋರ್ಟಲ್ ಆರಂಭವಾದ ಒಂದೇ ದಿನಕ್ಕೆ ಒಂದೂವರೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಒಂದು ಕೋಟಿ ಯುವಕ ಮತ್ತು ಯುವತಿಯರಿಗೆ ನೈಜ ಉದ್ಯೋಗ ತರಬೇತಿ ಕಲ್ಪಿಸುವ ಉದ್ದೇಶದಿಂದ ಪಿಎಂ ಇಂಟರ್ನ್‌ಶಿಪ್ ಯೋಜನೆಯನ್ನು ಆರಂಭಿಸಲಾಯಿತು.
ವರದಿ ಪ್ರಕಾರ ಪೋರ್ಟಲ್ನಲ್ಲಿ ಒಂದು ದಿನದಲ್ಲಿ ನೊಂದಾಯಿಸಿಕೊಂಡವರ ಸಂಖ್ಯೆ 1,55,109 ಇದೆ. ಎಲ್ ಅಂಡ್ ಟಿ, ರಿಲಾಯನ್ಸ್ ಸೇರಿದಂತೆ 193 ಕಂಪನಿಗಳು ಇದೇ ಪ್ಲಾಟ್ಫಾರ್ಮ್ನಲ್ಲಿ ಇಂಟರ್ನ್‌ಶಿಪ್ ಅವಕಾಶವನ್ನು ಒದಗಿಸಿವೆ.