Director Dattaraj passed away: ಕನ್ನಡ ಚಿತ್ರರಂಗದ ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರ ಹಿರಿಯ ನಿರ್ದೇಶಕ ಚಿ. ದತ್ತರಾಜ್ (87) ಅವರು ಇಂದು ನಿಧನ ಹೊಂದಿದ್ದಾರೆ.
ನಿರ್ದೇಶಕ ಚಿ. ದತ್ತರಾಜ್ ಅವರಿಗೆ ರಾಜ್ಕುಮಾರ್ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇತ್ತು. ಅವರು ರಾಜ್ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣಾವ್ರು ನಟಿಸಿದ ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಆರೋಗ್ಯ ತಪಾಸಣೆ
ಅಷ್ಟೇ ಅಲ್ಲ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ರುದ್ರಿ ಮುಂತಾದ ಚಿತ್ರಗಳನ್ನು ದತ್ತರಾಜ್ ನಿರ್ದೇಶಿಸಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ದೇಶಕ ಚಿ. ದತ್ತರಾಜ್ ಅವರ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment