Festival Sale : ಫೆಸ್ವಿವಲ್ ಸೀಸನ್ ನಲ್ಲಿ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಸಕ್ಕತ್ ಆಫರ್ ಸಿಗುತ್ತದೆ. ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ವಾರ್ಷಿಕ ದರ ಕಡಿತ ಮಾರಾಟ ಆರಂಭವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ
ಹೌದು, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon’s Great Indian Festival Sale) ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಸೆಪ್ಟೆಂಬರ್ 27ರಿಂದಲೇ ಪ್ರಾರಂಭವಾಗಿದೆ. ಈ ವಾರ್ಷಿಕ ಮಾರಾಟ ಮೇಳದಲ್ಲಿ ಎರಡೂ ಕಂಪನಿಗಳು ಸ್ಮಾರ್ಟ್‌ಫೋನ್ ಸಹಿತ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಿವೆ.
ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳಿಗೆ ದಸರಾ ರಜೆ
Amazon Festival Sale : ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳ ಮೇಲೆ 75% ರಿಯಾಯಿತಿ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಕಂಪ್ಯೂಟರ್ ಮೇಲೆ 75% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ವಿಶೇಷವಾದ ಡೀಲ್‌ಗಳು ಮತ್ತು ದೊಡ್ಡ ರಿಯಾಯಿತಿಗಳು ಪ್ರತಿದಿನ ಸಂಜೆ ಲಭ್ಯವಿರುತ್ತವೆ.
Xiaomi, Samsung ಮತ್ತು Lenovo ನಂತಹ ಉನ್ನತ ಬ್ರ್ಯಾಂಡ್‌ಗಳ ಪ್ರೀಮಿಯಂ ಟ್ಯಾಬ್ಲೆಟ್‌ಗಳಲ್ಲಿ 50% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಸೇಲ್‌ನಲ್ಲಿ ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಫ್ಲಾಟ್ 10 ಪ್ರತಿಶತ ರಿಯಾಯಿತಿ ಘೋಷಿಸಲಾಗಿದೆ.
ಇದನ್ನೂ ಓದಿ: EPF ಖಾತೆಯಲ್ಲಿ ಹೆಸರು ಬದಲಾವಣೆ ಮಾಡುವುದು ಹೇಗೆ? ಅಗತ್ಯವಿರುವ ದಾಖಲೆಗಳು ಯಾವುವು?
Festival Sale : ಪ್ರೈಮ್ ಮತ್ತು ಪ್ಲಸ್ ಸದಸ್ಯರಿಗೆ ವಿಶೇಷ ಪ್ರಯೋಜನಗಳು!
ಇತರರಿಗೆ ಹೋಲಿಸಿದರೆ ಅಮೆಜಾನ್ ಪ್ರೈಮ್ ಚಂದಾದಾರರು ಮತ್ತು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಫೆಸ್ಟಿವಲ್ ಸೇಲ್‌ನಲ್ಲಿ ಹೆಚ್ಚು ಆಫರ್ ಪಡೆಯುತ್ತಾರೆ. ರಿಯಾಯಿತಿಗಳು, ಡೀಲ್‌ಗಳು ಮತ್ತು ಕೊಡುಗೆಗಳಿಗೆ ಪ್ರವೇಶವನ್ನು ಇವರು ಮೊದಲು ಪಡೆಯಬಹುದು.
ಸಾಮಾನ್ಯ ಗ್ರಾಹಕರು ಕೂಡಾ ಬ್ಯಾಂಕ್ ಕೊಡುಗೆಗಳು ಮತ್ತು ವಿಶೇಷ ರಿಯಾಯಿತಿಗಳ ಲಾಭ ಪಡೆಯುತ್ತಿದ್ದಾರೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡೂ ಕೂಡಾ ಬಹುತೇಕ ಒಂದೇ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಆದರೆ ಬ್ಯಾಂಕ್ ರಿಯಾಯಿತಿಗಳು ಬದಲಾಗುತ್ತವೆ.