Alamelamma curse : ರಾಜಮನೆತನದ ಮೈಸೂರು ರಾಜ್ಯದ ಒಡೆಯರ್ ರಾಜವಂಶಸ್ಥರಿಗೆ 400 ವರ್ಷಗಳ ಹಿಂದಿನ ಶಾಪ ಮತ್ತೆ ಕಾಡುತ್ತಿದೆ. 1612 ರಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ತಿರುಮಲರಾಜನನ್ನು ಪದಚ್ಯುತಗೊಳಿಸಿದ ನಂತರ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ರಾಜ ಒಡೆಯರ್ ಮೈಸೂರನ್ನು ವಶಪಡಿಸಿಕೊಂಡಾಗ ಇದು ಪ್ರಾರಂಭವಾಯಿತು.
Alamelamma curse : ಶಾಪವಿಮೋಚನೆಗಾಗಿ ಪೂಜೆ
ಅಂದಿನ ರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ. ಹಾಗಾದರೆ ಈ ಅಲಮೇಲಮ್ಮಯಾರು ಎಂದು ತಿಳಿದುಕೊಳ್ಳಿ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ; ಇಂದು ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿಗೆ ಚಾಲನೆ
ಅಲಮೇಲು ಯಾರು?
ಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯ. ಆತನ ಪತ್ನಿ ಅಲಮೇಲಮ್ಮ. ಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಪತ್ನಿಯೊಡನೆ ಅಲ್ಲಿ ನೆಲೆಸುತ್ತಾನೆ.
ನವರಾತ್ರಿಯ ಆಭರಣ
ಶ್ರೀರಂಗರಾಯನ ಮರಣದ ನ೦ತರ ಒಮ್ಮೆ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಗಾಗಿ ಅಲಮೇಲಮ್ಮನ ಒಡವೆಗಳನ್ನು ಒಪ್ಪಿಸುವಂತೆ ರಾಜಾಜ್ಞೆ ಮಾಡಲಾಯಿತು. ಆದರೆ ಅಲಮೇಲಮ್ಮರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಹಾಗಾಗಿ ಆಕೆಯಿಂದ ಒಡವೆಗಳನ್ನು ಕಿತ್ತುಕೊ೦ಡು ಬರುವ೦ತೆ ಒಡೆಯರು ಅಪ್ಪಣೆ ಮಾಡುತ್ತಾರೆ.
ಬೆನ್ನಟ್ಟಿದ ರಾಜಭಟರು
ರಾಜರ ಆಜ್ಞೆಯಂತೆ ರಾಜಭಟರು ಅಲಮೇಲಮ್ಮವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ. ಇದನ್ನು ತಿಳಿದ ಅಲಮೇಲಮ್ಮ, ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲ೦ಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಿಂದ ಆಕೆ ಶಾಪ ನೀಡುತ್ತಾಳೆ.
ಇದನ್ನೂ ಓದಿ: BPL ration card : ಇನ್ಮುಂದೆ ರೇಷನ್ ಕಾರ್ಡ್ ಪಡೆಯುವುದಕ್ಕೆ ಹೊಸ ನಿಯಮ; ಬಿಪಿಎಲ್ ಕಾರ್ಡ್ ರದ್ದಾದರೂ ಭಯಪಡಬೇಕಿಲ್ಲ!
ಶಾಪವೇನು?
ಅಲಮೇಲಮ್ಮ ಕೋಪದಿಂದ “ಮಾಲಂಗಿ ಮಡುವಾಗಿ, ತಲಕಾಡು ಮರುಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ” ಎ೦ದು ಶಾಪ ನೀಡಿ ತನ್ನಲಿದ್ದ ಒಡವೆ ಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.
ನೆರವೇರಿದ ಶಾಪ
ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದ್ದು, ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಲ್ಲದೆ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ.