ಆಧಾರ್ ಪ್ಯಾನ್: ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (Central Govt) ಪ್ರಮುಖ ಘೋಷಣೆ ಮಾಡಿದ್ದು, ಸುಕನ್ಯಾ ಸಮೃದ್ಧಿ(Sukanya Samriddhi) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (Saving Scheme for Senior Citizens) ಸೇರಿದಂತೆ ಇತರ ಉಳಿತಾಯ ಯೋಜನೆಗಳು ಬಡ್ಡಿದರಗಳನ್ನು ಹೆಚ್ಚಿಸಿವೆ. ಇದು 10 ರಿಂದ 70 ಬೇಸಿಸ್ ಪಾಯಿಂಟ್‌ಗಳವರೆಗೆ ಇರುತ್ತದೆ. ಈಗ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಇವೆಲ್ಲವೂ ಏಪ್ರಿಲ್ 1 ರಿಂದಲೇ ಜಾರಿಗೆ ಬಂದಿವೆ.
ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ ಏನೆಲ್ಲಾ ಬದಲಾವಣೆ?
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (Aadhaar Card and PAN Card Link)ಮಾಡುವ ಗಡುವನ್ನು ಈಗಾಗಲೇ ವಿಸ್ತರಿಸಿರುವ ಕೇಂದ್ರ ಸರ್ಕಾರ ಇದೀಗ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ನಿಯಮವನ್ನು ತಂದಿದ್ದು, ಮಹತ್ವದ ಘೋಷಣೆ ಮಾಡಲಾಗಿದೆ.
ಹೌದು, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್(PPF,, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ(PAN Card and Aadhaar Card are mandatory). ಈ ಸಂಬಂಧ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಮತ್ತು ಪ್ಯಾನ್ ಕಡ್ಡಾಯವಾಗಿದೆ. ಇದು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ಸಹ ಒಳಗೊಂಡಿದೆ. ಈ ಉಳಿತಾಯ ಯೋಜನೆಗಳ ಖಾತೆಗಳಲ್ಲಿನ ಹೂಡಿಕೆಯು ನಿಗದಿತ ಮಿತಿಯನ್ನು ಮೀರಿದರೆ, ಆಗ ಪ್ಯಾನ್ ಕಾರ್ಡ್ (Pan card) ಒದಗಿಸಬೇಕು ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಕಾಜಲ್ ಅಗರ್ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್ ಶಾಕ್; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್ವಾಲ್ ಹೇಳಿಕೆ
ಇನ್ನು, ಆಧಾರ್ ಕಾರ್ಡ್ (Aadhar Card) ಇಲ್ಲದೆ ಈ ಖಾತೆಯನ್ನು ತೆರೆದ ಚಂದಾದಾರರು ಸೆಪ್ಟೆಂಬರ್ 30, 2023 ರೊಳಗೆ ಆಯಾ ಕಚೇರಿಗಳಲ್ಲಿ ಆಧಾರ್ ಕಾರ್ಡ್(Aadhar Card) ಅನ್ನು ಹಾಜರುಪಡಿಸಬೇಕು ಎಂದು ಸ್ಪಷ್ಟಪಡಿಸಲಾಗಿದ್ದು,6 ತಿಂಗಳ ಗಡುವು ನೀಡಲಾಗಿದೆ. ಇನ್ನು ಮುಂದೆ ಹೊಸ ಖಾತೆ ತೆರೆಯುವವರು ಆಧಾರ್ ಕಾರ್ಡ್ ಸಲ್ಲಿಸಬೇಕು. ಈಗಾಗಲೇ ಖಾತೆ ಹೊಂದಿರುವವರು 6 ತಿಂಗಳೊಳಗೆ ಆಧಾರ್ ಕಾರ್ಡ್ ಸಲ್ಲಿಸಬೇಕು. ಹಾಗೆ ಮಾಡಲು ವಿಫಲವಾದರೆ 6 ತಿಂಗಳ ನಂತರ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ.
ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ
ಖಾತೆಗಳು ರೂ.50 ಸಾವಿರಕ್ಕಿಂತ ಹೆಚ್ಚಿರುವಾಗ..
ಯಾವುದೇ ಹಣಕಾಸು ವರ್ಷದಲ್ಲಿ ಖಾತೆಯಲ್ಲಿರುವ ಎಲ್ಲಾ ಕ್ರೆಡಿಟ್‌ಗಳು ರೂ. ಒಂದು ಲಕ್ಷ ದಾಟಿದಾಗ, ಖಾತೆಯಲ್ಲಿ ರೂ.50 ಸಾವಿರಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಕಾರ್ಡ್ (Pan card)ಸಲ್ಲಿಸಬೇಕು. ನೀವು ಇದನ್ನು ಮಾಡದಿದ್ದರೆ, ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಮತ್ತೆ ಪ್ಯಾನ್ ಕಾರ್ಡ್ ಸಲ್ಲಿಸುವವರೆಗೆ ಯಾವುದೇ ವಹಿವಾಟು ನಡೆಸುವಂತಿಲ್ಲ.
ಇದನ್ನು ಓದಿ: Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ, ಇವರಿಗೆ ಮಾತ್ರ..!