Small Savings Schemes: ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Savings Schemes) ಉಳಿತಾಯ ಮಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಣ್ಣ ಮೊತ್ತದ ಯೋಜನೆಗಳಲ್ಲಿನ ಉಳಿತಾಯ ಖಾತೆಗಳ 2023-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಬಡ್ಡಿದರವನ್ನು(interest rates) ಪರಿಷ್ಕರಿಸಿದೆ.
ಇದನ್ನು ಓದಿ: Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ, ಇವರಿಗೆ ಮಾತ್ರ..!
ಕೇಂದ್ರ ಹಣಕಾಸು ಸಚಿವಾಲಯವು ವಿವಿಧ ರೀತಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಹೊಸ ಬಡ್ಡಿದರಗಳು ಇಂದಿನಂದಲೇ (ಏಪ್ರಿಲ್ 1) ಜಾರಿಗೆ ಬರಲಿವೆ ಎಂದು ಅದು ಹೇಳಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಯೋಜನೆಗಳ ಮೇಲೆ ಕೇಂದ್ರವು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರಗಳನ್ನು ಪರಿಷ್ಕರಿಸುತ್ತದೆ.
ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ
ಕೇಂದ್ರದ ಈ ನಿರ್ಧಾರದಿಂದ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಯೋಜನೆಗಳ ಬಡ್ಡಿದರಗಳು ಬದಲಾಗಲಿವೆ. ಆದರೆ, ಹಣಕಾಸು ಇಲಾಖೆಯು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸಾಮಾನ್ಯ ಉಳಿತಾಯ ಠೇವಣಿಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಪ್ರಕಟಿಸಿಲ್ಲ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮಹತ್ವದ ಆದೇಶ; ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಸಂಪೂರ್ಣ ಸ್ಥಗಿತ
ಕೇಂದ್ರ ಸರ್ಕಾರ ಪರಿಷ್ಕರಿಸಿದ ಪರಿಷ್ಕೃತ ಬಡ್ಡಿದರಗಳು:
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ 7% ಇದ್ದ ಬಡ್ಡಿದರವನ್ನು ಏಪ್ರಿಲ್ 1 ರಿಂದ ಶೇಕಡಾ 7.7 ಕ್ಕೆ ಹೆಚ್ಚಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು 7.6% ರಿಂದ 8%ಕ್ಕೆ ಹೆಚ್ಚಿಸಲಾಗಿದೆ,
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ದರವನ್ನು ಈಗಿರುವ ಶೇ.8ರಿಂದ ಶೇ.8.2ಕ್ಕೆ ಹೆಚ್ಚಿಸಲಾಗಿದೆ.
ಮಾಸಿಕ ಆದಾಯ ಯೋಜನೆಯ ಮೇಲೆ ಶೇಕಡಾ 7.1 ಇದ್ದ ಬಡ್ಡಿದರವನ್ನು ಶೇಕಡಾ 7.4 ಕ್ಕೆ ಹೆಚ್ಚಿಸಲಾಗಿದೆ.
ಇದನ್ನು ಓದಿ: KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವು ಪ್ರಸ್ತುತ ಶೇಕಡಾ 7.2 ರಷ್ಟಿದ್ದು, ಇದನ್ನು 7.5ಕ್ಕೆ ಪರಿಷ್ಕರಿಸಲಾಗಿದೆ.
ಮೆಚುರಿಟಿ ಅವಧಿಯನ್ನು 120 ರಿಂದ 115 ತಿಂಗಳಿಗೆ ಇಳಿಸಲಾಗಿದೆ.
ಒಂದು ವರ್ಷದ ನಿಶ್ಚಿತ ಠೇವಣಿ ಬಡ್ಡಿದರವನ್ನು ಶೇಕಡಾ 6.6 ರಿಂದ ಶೇಕಡಾ 6.8 ಕ್ಕೆ ಬದಲಾಯಿಸಲಾಗಿದೆ.
ಎರಡು ವರ್ಷಗಳ ಠೇವಣಿ ಬಡ್ಡಿ ದರವನ್ನು ಈಗಿರುವ ಶೇ.6.8ರಿಂದ ಶೇ.6.9ಕ್ಕೆ ಏರಿಸಲಾಗಿದೆ.
ಇದನ್ನು ಓದಿ: ಏಪ್ರಿಲ್ 1 ರಿಂದ ಇವುಗಳ ಬೆಲೆ ಭಾರೀ ಹೆಚ್ಚಳ: ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ನೋಡಿ
ಮೂರು ವರ್ಷದ ಠೇವಣಿಗೆ ಶೇ.6.9ರಷ್ಟು ಬಡ್ಡಿ ನೀಡುತ್ತಿದ್ದು, ಈಗ ಶೇ.7ಕ್ಕೆ ಏರಿಕೆಯಾಗಿದೆ.
ಐದು ವರ್ಷಗಳ ಕಾಲಮಿತಿ ಠೇವಣಿ ಬಡ್ಡಿ ದರವನ್ನು ಶೇ.7ರಿಂದ ಶೇ.7.5ಕ್ಕೆ ಹೆಚ್ಚಿಸಲಾಗಿದೆ.
ಐದು ವರ್ಷಗಳ ಮರುಕಳಿಸುವ ಠೇವಣಿ ಮೇಲಿನ ಪ್ರಸ್ತುತ ಶೇಕಡಾ 5.8 ರ ಬಡ್ಡಿ ದರವನ್ನು ಶೇಕಡಾ 6.2 ಕ್ಕೆ ಬದಲಾಯಿಸಲಾಗಿದೆ. ಈ ಬಡ್ಡಿದರಗಳು ಜೂನ್ 30ರವರೆಗೆ ಮಾನ್ಯವಾಗಿರುತ್ತವೆ.
NOTE: ಹಣಕಾಸು ಇಲಾಖೆಯು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸಾಮಾನ್ಯ ಉಳಿತಾಯ ಠೇವಣಿಗಳ ಬಡ್ಡಿದರಗಳು ಸೇರಿದಂತೆ ಪಿಪಿಎಫ್ ಯೋಜನೆಯ ದರಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ