ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿ ಸಹ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್(Kajal Aggarwal’) ಅವರು ಸದಾ ವಿವಾದದಿಂದ ದೂರವಿದ್ದು, ಟ್ರೋಲ್ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.
ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ ಏನೆಲ್ಲಾ ಬದಲಾವಣೆ?
ಈಗ ಕಾಜಲ್ ಅಗರ್ವಾಲ್ ಬಾಲಿವುಡ್(Bollywood) ಕುರಿತು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ ವಿವಾದ ಸ್ವರೂಪ ಪಡೆದುಕೊಂಡಿದೆ. ಹೌದು ವಾಹಿನಿಯೊಂದು ನಡೆಸಿದ ‘ರೈಸಿಂಗ್ ಇಂಡಿಯಾ ರಿಯಲ್ ಹೀರೋಸ್’ ವೇದಿಕೆ ಮೇಲೆ ಮಾತನಾಡಿರುವ ಕಾಜಲ್, ದಕ್ಷಿಣ ಸಿನಿಮಾ ಇಂಡಸ್ಟ್ರಿಯ ನೈತಿಕತೆ, ಶಿಸ್ತು ನನಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ, ಹಿಂದಿ ಚಿತ್ರರಂಗದಲ್ಲಿ ಅದರ ಕೊರತೆಯಿದೆ ಎಂದು ನನಗೆ ಅನಿಸುತ್ತದೆ ಎಂದು ಕಾಜಲ್ ಹೇಳಿಕೆ ನೀಡಿದ್ದಾರೆ. ಬಾಲಿವುಡ್-ದಕ್ಷಿಣ ಭಾರತ ಎಂಬ ಚರ್ಚೆಗೆ ನಟಿ ಕಾಜಲ್ ನೀಡಿರುವ ಈ ಹೇಳಿಕೆ ಮತ್ತಷ್ಟು ತುಪ್ಪ ಸುರಿಯುವಂತಿದೆ.
ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ
ನಟಿ ಕಾಜಲ್ ಅಗರ್ವಾಲ್ (Kajal Aggarwal) ಮಾಡಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಿಂದಿ (ಬಾಲಿವುಡ್) ಚಿತ್ರರಂಗದ ಮೂಲಕ. ಆದರೆ, ಖ್ಯಾತಿಗಳಿಸಿದ್ದು ಧಕ್ಷಿಣ ಭಾರತದ ಸಿನಿಮಾಗಳ ಮೂಲಕ. ಹೌದು, ಧಕ್ಷಿಣದ ತಲುಗು, ತಮಿಳು ಸಿನಿಮಾಗಳಲ್ಲಿ ಖ್ಯಾತ ನಟರ ಜೊತೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಬಳಿಕ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ ನಟಿ ಕಾಜಲ್, ಸಿಂಗಮ್ ಮೊದಲಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಈಗ ಅಲ್ಲಿನವರಿಗೆ ಎಥಿಕ್ಸ್ನ ಕೊರತೆ ಇದೆ ಎಂದು ನೇರ ಮಾತುಗಳಲ್ಲಿ ಕಾಜಲ್ ಹೇಳಿದ್ದಾರೆ. ಇದಕ್ಕೆ ಬಾಲಿವುಡ್ನ ಕೆಲವರು ಅಪಸ್ವರ ತೆಗೆದಿದ್ದಾರೆ ಎನ್ನಲಾಗಿದ್ದು, ಈ ಹೇಳಿಕೆಯಿಂದ ನಟಿ ಕಾಜಲ್ ಅಗರ್ವಾಲ್ಗೆ ಬಾಲಿವುಡ್ ನಲ್ಲಿ ಆಫರ್ಗಳು ಕೈತಪ್ಪಿದರೂ ಅಚ್ಚರಿ ಏನಿಲ್ಲ
ಇನ್ನು, ನಟಿ ಕಾಜಲ್ ಅವರ ಈ ಹೇಳಿಕೆಗೆ, ಕಾಜಲ್ ಅಗರ್ವಾಲ್ ನಿಜವಾದ ಕ್ವೀನ್. ಈ ರೀತಿ ವೇದಿಕೆ ಮೇಲೆ ಮಾತನಾಡಲು ಧೈರ್ಯ ಬೇಕು’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜಲ್ ಅಗರ್ವಾಲ್ ಅವರ ವಿರುದ್ಧ ಕ್ಯಾತೆ ತೆಗೆದಿದ್ದು, ಬಾಲಿವುಡ್ನಲ್ಲಿ ನಟಿಸಿ ಕೂಡ ಈ ರೀತಿ ಹೇಳೋದು ಸರಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ, ಇವರಿಗೆ ಮಾತ್ರ..!
ಕಾಜಲ್ ಅಗರ್ವಾಲ್ ಅವರು ಸದ್ಯ ಕಮಲ್ ಹಾಸನ್ (Kamal Hasan)ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ‘ಉಮಾ’ ಹೆಸರಿನ ಹಿಂದಿ ಚಿತ್ರ ಅವರ ಕೈಯಲ್ಲಿದೆ. ಆದರೆ, ಕಾಜಲ್ ಅವರ ಈ ಬೋಲ್ಡ್ ಹೇಳಿಕೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದುನೋಡಬೇಕು.
Queen @MsKajalAggarwal’s bold statement😳💥
‘I prefer the ethics,discipline of South cinema,which i feel is lacking in Hindi Cinema’ pic.twitter.com/JIAMH8jy4p
— Aryan (@Pokeamole_) March 30, 2023
ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ