PM Kisan : ರೈತರಿಗೆ ಸಂತಸದ ಸುದ್ದಿ. ಈಗ ನೀವು ಡಬಲ್ ಲಾಭವನ್ನು ಪಡೆಯಬಹುದು. ಏಕೆಂದರೆ ನೀವು ಪಿಎಂ ಕಿಸಾನ್ ಯೋಜನೆಯಡಿ ದುಪ್ಪಟ್ಟು ಹಣವನ್ನು ಪಡೆಯಬಹುದು. ಹೇಗೆ ಭಾವಿಸುತ್ತೀರಾ ? ಅಗಾದರೆ ನೀವು ಇದನ್ನು ತಿಳಿದಿರಬೇಕು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ (PM Kisan Scheme) ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ ರೂ. 6 ಸಾವಿರ ನೀಡಲಾಗುತ್ತದೆ. ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ (Farmer’s Bank Account) ಒಂದೇ ಬಾರಿಗೆ ಜಮಾ ಮಾಡದೆ ಮೂರೂ ಕಂತುಗಳಲ್ಲಿ ರೂ. 2 ಸಾವಿರಗಳಂತೆ ಜಮಾ ಮಾಡಲಾಗುತ್ತದೆ.
ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್, ಭಾರೀ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಕೇವಲ ರೂ.94ಕ್ಕೆ ..!
ಮೋದಿ ಸರ್ಕಾರ ಈಗಾಗಲೇ ರೈತರಿಗೆ 13 ಕಂತುಗಳ ಹಣವನ್ನು ನೀಡಿದೆ. ಈಗ 14ನೇ ಕಂತು ಸಿಗಬೇಕಿದೆ. ಈ ತಿಂಗಳಲ್ಲೇ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆ ಇದೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.
ರೈತರರಿಗೆ ನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆ ಜಾರಿ
ಆದರೆ ಮಹಾರಾಷ್ಟ್ರ ಸರ್ಕಾರ ರೈತರಿಗೆ ಸಿಹಿಸುದ್ದಿ ಮತ್ತೊಂದು ನೀಡಿದ್ದು, ರೈತರಿಗೆ ವಿಶಿಷ್ಟ ಯೋಜನೆಯನ್ನು ಪರಿಚಯಿಸಿದೆ. ಅದರ ಹೆಸರು ನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆ (Namo Shektari Maha Samman Yojana). ಈ ಯೋಜನೆಯಡಿಯಲ್ಲಿ, ರೈತರಿಗೆ ವಾರ್ಷಿಕ ರೂ. 6 ಸಾವಿರಗಳನ್ನೂ ಮಹಾರಾಷ್ಟ್ರ ಸರ್ಕಾರವು (Government of Maharashtra) ನೀಡುತ್ತದೆ.
ಇದನ್ನು ಓದಿ: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
ಕೇಂದ್ರ ಸರ್ಕಾರ ನೀಡುವ ಪಿಎಂ ಕಿಸಾನ್ ಯೋಜನೆ (PM Kisan Yojana) ರೂ. 6 ಸಾವಿರ, ರಾಜ್ಯ ಸರ್ಕಾರ ರೂ. 6 ಸಾವಿರ ಹೆಚ್ಚುವರಿಯಾಗಿದೆ ನೀಡಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಹಿರಂಗಪಡಿಸಿದ್ದಾರೆ. ಈ ಯೋಜನೆಯ ಮೂಲಕ ಒಂದು ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಹೇಳಿದ್ದಾರೆ.
ಇದನ್ನು ಓದಿ: ಜೂನ್ ಮೊದಲ ದಿನವೇ ಭಾರೀ ಪ್ರಮಾಣದಲ್ಲಿ ಕಡಿಮೆಯಾದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಹೊಸ ದರಗಳು ಹೀಗೆವೆ!
ರೈತರಿಗೆ ವಾರ್ಷಿಕ ರೂ. 12 ಸಾವಿರ
ಅಂದರೆ ಮಹಾರಾಷ್ಟ್ರದ ರೈತರಿಗೆ (Farmer) ವಾರ್ಷಿಕ ರೂ. 12 ಸಾವಿರ ಸಿಗಲಿದೆ ಎಂದು ಹೇಳಬಹುದು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೂ. 6 ಸಾವಿರ ಬರಲಿದೆ. ಅಲ್ಲದೆ ಈ ಹೊಸ ಯೋಜನೆ ಮೂಲಕ ಇನ್ನೂ ರೂ. 6 ಸಾವಿರ ಸೇರ್ಪಡೆಯಾಗಲಿದೆ. ಹೀಗಾಗಿ ರೈತರಿಗೆ ಒಟ್ಟು ರೂ. 12 ಸಾವಿರ ಬರಲಿದೆ ಎಂದು ಹೇಳಬಹುದು.
ತಕ್ಷಣವೇ KYC ಪೂರ್ಣಗೊಳಿಸಿ
ಮತ್ತೊಂದೆಡೆ, ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ಪಡೆಯಲು ಬಯಸುವ ರೈತರು KYC ಅನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ಕಂತು ಬರುವುದಿಲ್ಲ. ಆದ್ದರಿಂದ ಯಾವುದೇ ರೈತರು ಇನ್ನೂ ಪಿಎಂ ಕಿಸಾನ್ ಯೋಜನೆಯಲ್ಲಿದ್ದರೆ ಮತ್ತು KYC ಅನ್ನು ಪೂರ್ಣಗೊಳಿಸದಿದ್ದರೆ ಅದನ್ನು ತಕ್ಷಣವೇ ಪೂರ್ಣಗೊಳಿಸಿ. ಇಲ್ಲದಿದ್ದರೆ ಮುಂದೆ ತೊಂದರೆಯಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13 ಕಂತುಗಳ ಹಣವನ್ನು ಸ್ವೀಕರಿಸಲಾಗಿದ್ದು, ಅಂದರೆ ಸುಮಾರು ರೂ. 26 ಸಾವಿರದವೆರೆಗೆ ರೈತರು ಇದರ ಲಾಭ ಪಡೆದಿದ್ದಾರೆ. ಹಾಗೂ ಈ ತಿಂಗಳು ಇನ್ನೂ ರೂ.2000 ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ಇದನ್ನು ಓದಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅರ್ಜಿ ಅಹ್ವಾನ