ನಿಮ್ಮ ಕೈಯಲ್ಲಿರುವ ಹಣದಿಂದ ಮತ್ತೆ ಹಣ ಸಂಪಾದಿಸಬಹುದು. ಇದಕ್ಕೆ ಉತ್ತಮ ಆದಾಯ ನೀಡುವ ಇನ್ವೆಸ್ಟ್ಮೆಂಟ್ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ನೀವು ರಿಸ್ಕ್ ಇಲ್ಲದೆ ಆದಾಯವನ್ನು ಪಡೆಯಲು ಬಯಸಿದರೆ, ಪೋಸ್ಟ್ ಆಫೀಸ್ ಯೋಜನೆ ಒಳ್ಳೆಯದು ಎಂದು ಹೇಳಬಹುದು. ಇವುಗಳಲ್ಲಿ ನೀವು ಹಣವನ್ನು ಹಾಕಿದರೆ, ನಿಮಗೆ ಉತ್ತಮ ಲಾಭ ಸಿಗುತ್ತದೆ. ಹಣವನ್ನು ಕಳೆದುಕೊಳ್ಳುವ ರಿಸ್ಕ್ ಇರುವುದಿಲ್ಲ.
ಅಂಚೆ ಕಚೇರಿ ನೀಡುವ ಯೋಜನೆಗಳಲ್ಲಿ ಮಂತ್ಲಿ ಇಂಕಮ್ ಸ್ಕೀಮ್ ಕೂಡ ಒಂದು. ಇದರಲ್ಲಿ ಸೇರಿದರೆ, ಪ್ರತಿ ತಿಂಗಳು ಹಣ ಕೈಗೆ ಬರುತ್ತದೆ. ನೀವು ಹಾಕಿದ ಹಣಕ್ಕೆ ಕೇಂದ್ರ ಸರ್ಕಾರವು ಗ್ಯಾರಂಟಿ ನೀಡುತ್ತದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ(Monthly Income Scheme) ಯಲ್ಲಿ ಪ್ರಸ್ತುತ ಶೇ 6.6 ರಷ್ಟು ಬಡ್ಡಿ ಸಿಗುತ್ತದೆ. ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದವನ್ನು ಪರಿಶೀಲಿಸುತ್ತದೆ.
ಉದಾಹರಣೆಗೆ, ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ (Monthly Income Scheme) ಸೇರಿದರೆ, ನೀವು 9 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ಇದು ಜಂಟಿ ಖಾತೆಗೆ (Joint Account) ಅನ್ವಯಿಸುತ್ತದೆ. ಒಂದೇ ಸಿಂಗಲ್ ಅಕೌಂಟ್ ಇದ್ದರೆ 4.5 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ನೀವು ಜಂಟಿ ಖಾತೆ ತೆರೆದು 9 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು 4950 ರೂ. ಸಿಗುತ್ತದೆ.
ನೀವು ಹತ್ತಿರದ ಅಂಚೆ ಕಚೇರಿಗೆ ಹೋಗಿ ಮಾಸಿಕ ಆದಾಯ ಯೋಜನೆಗೆ (Monthly Income Scheme) ಸೇರಬಹುದು. ಎರಡು ಪಾಸ್ಪೋರ್ಟ್ ಗಾತ್ರದ ಫೋಟೋಗಳು, ಆಧಾರ್ ಕಾರ್ಡ್, ಮತದಾರರ ಕಾರ್ಡ್, ಚಾಲನಾ ಪರವಾನಗಿ ಮುಂತಾದ ದಾಖಲೆಗಳನ್ನು ತೆಗೆದುಕೊಂಡು ಸಿಂಗಲ್ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು.
ಇದನ್ನು ಓದಿ: ಎಸ್‌ಬಿಐನಿಂದ ಅದ್ಬುತ ಆಫರ್;ಈ ಯೋಜನೆಗೆ ಸೇರಿದರೆ ತಿಂಗಳಿಗೆ 9 ಸಾವಿರ ರೂ!