ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು,ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ರತ್ನಗಿರಿ ಕೆಮಿಕಲ್ ಫ್ಯಾಕ್ಟರಿಯ ಎಂಐಡಿಸಿ ಘಟಕದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸತತವಾಗಿ ಎರಡು ಸ್ಫೋಟಗಳು ನಡೆದಿವೆ ಎನ್ನಲಾಗಿದ್ದು, ಕಂಪನಿಯೊಳಗೆ 50 ಕಾರ್ಮಿಕರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇನ್ನು, ಇದೇ ತಿಂಗಳಲ್ಲಿ ಆಂಧ್ರದ ಕಾಕಿನಾಡ ಬಳಿಯ ರಾಸಾಯನಿಕ ಕಾರ್ಖಾನೆ, ಕೇರಳದ ಮಂಜೇಶ್ವರದ ಪ್ಲೈವುಡ್ ಕಾರ್ಖಾನೆ & ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಹಲವರು ಸಾವನ್ನಪ್ಪಿದ್ದರು.
Maharashtra: 4 people died and 1 critically injured in an explosion at a chemical factory in an industrial area in Ratnagiri district. More details awaited.
— ANI (@ANI) March 20, 2021