ಬೆಂಗಳೂರು: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ನ್ಯಾಷನಲ್ ಸರ್ಕಾರ. ಯಡಿಯೂರಪ್ಪ ನ್ಯಾಷನಲ್ ಗವರ್ನಮೆಂಟ್ ಚೀಫ್ ಮಿನಿಸ್ಟರ್ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಚ್ ವಿಶ್ವನಾಥ್ ಅವರು, ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ, ನ್ಯಾಷನಲ್ ಸರ್ಕಾರ. ಯಡಿಯೂರಪ್ಪ ನ್ಯಾಷನಲ್ ಗವರ್ನಮೆಂಟ್ ಚೀಫ್ ಮಿನಿಸ್ಟರ್. ಸಿದ್ದರಾಮಯ್ಯರನ್ನು ಹೆಚ್.ಡಿ.ಕುಮಾರಸ್ವಾಮಿ, ಹೆಚ್ಡಿಕೆ ಅವರನ್ನು ಸಿದ್ದರಾಮಯ್ಯ ಮತ್ತು ಇಬ್ಬರೂ ಸೇರಿ ಸಿಎಂ ಬಿಎಸ್ ವೈ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ವಿಶ್ವನಾಥ್ ಅವರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ನಾವು ಯಾವ ಪುರುಷಾರ್ಥಕ್ಕೆ ದಂಗೆ ಎದ್ದೆವೋ, ಸರ್ಕಾರ ಬೀಳಿಸಿದೆವೋ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.