Pension: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!

Pension: ಕಾರ್ಮಿಕ ಇಲಾಖೆ ವತಿಯಿಂದ ನಿಮ್ಮ ಮನೆಯ ಸದಸ್ಯರು ಯಾರಾದರು ಪಿಂಚಣಿ ಪಡೆಯುವವರಿದ್ದರೆ ಸರ್ಕಾರ ಗುಡ್​​ನ್ಯೂಸ್ ನೀಡಿದೆ. ಪಿಂಚಣಿ ಪಡೆಯುತ್ತಿದ್ದವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರೆ ಅಂತಹ ಕುಟುಂಬ ಸದಸ್ಯರಿಗೆ ಪಿಂಚಣಿ ನೀಡುವುದಾಗಿ ತಿಳಿಸಿದೆ. ಮೃತ…

Pension construction workers

Pension: ಕಾರ್ಮಿಕ ಇಲಾಖೆ ವತಿಯಿಂದ ನಿಮ್ಮ ಮನೆಯ ಸದಸ್ಯರು ಯಾರಾದರು ಪಿಂಚಣಿ ಪಡೆಯುವವರಿದ್ದರೆ ಸರ್ಕಾರ ಗುಡ್​​ನ್ಯೂಸ್ ನೀಡಿದೆ. ಪಿಂಚಣಿ ಪಡೆಯುತ್ತಿದ್ದವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರೆ ಅಂತಹ ಕುಟುಂಬ ಸದಸ್ಯರಿಗೆ ಪಿಂಚಣಿ ನೀಡುವುದಾಗಿ ತಿಳಿಸಿದೆ. ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು 1,000 ರೂ. ಕುಟುಂಬ ಪಿಂಚಣಿ ನೀಡಲಿದ್ದು, ಅಗತ್ಯ ದಾಖಲೆ ನೀಡಿ ಕಾರ್ಮಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು ಎಂದು ಸೂಚಿಸಲಾಗಿದೆ.

Pension construction workers

Pension: 5 ಲಕ್ಷ ರೂಪಾಯಿವರೆಗೂ ಪರಿಹಾರ ಸೌಲಭ್ಯ..

ಕಾರ್ಮಿಕ ಇಲಾಖೆಯಲ್ಲಿ ಕಲ್ಯಾಣ ಮಂಡಳಿಯಿಂದ ಅಪಘಾತ ಪರಿಹಾರದಡಿ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅಪಘಾತದದ ಸಂದರ್ಭದಲ್ಲಿ ಪರಿಹಾರ ದೊರೆಯುತ್ತದೆ. ಮರಣದ ಹೊಂದಿದಲ್ಲಿ 5 ಲಕ್ಷ, ಕಾರ್ಮಿಕನು ಸಂಪೂರ್ಣ ಶಾಶ್ವತ ದುರ್ಬಲತೆಯ ಪರಿಸ್ಥಿತಿಯಲ್ಲಿ 2 ಲಕ್ಷ , ಭಾಗಶಃ ಶಾಶ್ವತ ದುರ್ಬಲತೆಯ ಸ್ಥಿತಿಯಲ್ಲಿ 1 ಲಕ್ಷ ರೂ. ಅಪಘಾತದ ಪರಿಹಾರ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯಕ್ಕೆ ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು.

Vijayaprabha Mobile App free

ಇದನ್ನು ಓದಿ: ಉಚಿತ ಯೋಜನೆಗೆ ಈ ಕಾರ್ಡ್‌ ಕಡ್ಡಾಯ; ಇವರಿಗೆ ಸಿಗುತ್ತೆ ಮಾಸಿಕ ಪಿಂಚಣಿ 3,000 ರೂ!

Pension: ತಿಂಗಳಿಗೆ ₹3,000 ಪಿಂಚಣಿ..

ಕಾರ್ಮಿಕ ಇಲಾಖೆಯು 60 ವರ್ಷ ದಾಟಿದ ನೋಂದಾಯಿತ ಕಾರ್ಮಿಕರಿಗೆ ಮಂಡಳಿಯು ಪ್ರತಿ ತಿಂಗಳಿಗೆ ₹ 3000 ಪಿಂಚಣಿಯನ್ನು ನೀಡಲಿದೆ. ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Pension: ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

  • ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ,
  • ಫಲಾನುಭವಿಯ ಬ್ಯಾಂಕ್‌ ಪಾಸ್‌ ಬುಕ್‌ ಪ್ರತಿ,
  • ಜೀವಿತ ಪ್ರಮಾಣ ಪತ್ರ,
  • ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಪ್ರತಿ,
  • ಉದ್ಯೋಗ ದೃಢೀಕರಣ ಪತ್ರ
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

Pension: ₹ 1000 ರೂ. ಪಿಂಚಣಿ ಸೌಲಭ್ಯ..

ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯಿಂದ ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು ₹ 1000 ಕುಟುಂಬ ಪಿಂಚಣಿ ನೀಡುತ್ತಿದ್ದು, ಅಗತ್ಯ ದಾಖಲೆ ನೀಡಿ ಕಾರ್ಮಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

ಕುಟುಂಬ ಪಿಂಚಣಿ ಯೋಜನೆಯಡಿ ಈ ಸೌಲಭ್ಯವು ಮೃತ ಪಿಂಚಣಿದಾರರ ಪತಿ ಇಲ್ಲವೇ ಪತ್ನಿಗೆ ಮಂಡಳಿಯು ಮಾಸಿಕವಾಗಿ 1,000 ರೂ. ಕುಟುಂಬ ಪಿಂಚಣಿ ನೀಡಲಾಗುತ್ತದೆ. ಮೃತ ಪಿಂಚಣಿದಾರರು ಮಂಡಳಿಯಿಂದ ಪಿಂಚಣಿಪಡೆಯುತ್ತಿರುವ ವೇಳೆ ಮರಣ ಹೊಂದಿದರೆ ಮಾತ್ರ ಈ ಸೌಲಭ್ಯ ಪಡೆಯಬಹುದು.

ಇದನ್ನು ಓದಿ: ಆಧಾರ್‌-ರೇಷನ್ ಕಾರ್ಡ್‌ ಲಿಂಕ್ ಲಾಸ್ಟ್‌ ಡೇಟ್‌; ಈ ವೆಬ್‌ಸೈಟ್‌ನಿಂದ ರೇಷನ್‌ಕಾರ್ಡ್‌ಗೆ ಆಧಾರ್‌ ಲಿಂಕ್ ಸುಲಭವಾಗಿ ಮಾಡಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.