PM Kisan FPO Scheme: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Scheme) ಯಡಿ ಇಲ್ಲಿಯವೆರೆಗೆ 13 ನೇ ಕಂತಿನವರೆಗೆ ರೈತರ ಖಾತೆಗೆ (Farmers Account) ಹಣ ಜಮಾ ಮಾಡಲಾಗಿದೆ. ಈಗ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಾ 14ನೇ ಕಂತನ್ನು ರೈತರು ಎದುರು ನೋಡುತ್ತಿದ್ದು, ಅವರ ಖಾತೆಗೆ 14ನೇ ಕಂತು ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಇದನ್ನು ಓದಿ: ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ..!
ಹೂಡಿಕೆಯಡಿ ಸರ್ಕಾರ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆ.. ರೈತರ ಆದಾಯ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಕೇಂದ್ರ ಸರ್ಕಾರವು ‘ಪಿಎಂ ಕಿಸಾನ್ ಎಫ್‌ಪಿಒ ಯೋಜನೆ’ (PM Kisan FPO Scheme) ಯನ್ನು ಪ್ರಾರಂಭಿಸಿದೆ.
ಹೌದು, ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಇದರ ಉದ್ದೇಶ. ಈ ಯೋಜನೆಯಡಿಯಲ್ಲಿ, ಕೃಷಿ ಉದ್ಯಮವನ್ನು ಪ್ರಾರಂಭಿಸಲು ಸರ್ಕಾರವು ರೈತರನ್ನು ಪ್ರೋತ್ಸಾಹಿಸುತ್ತಿದ್ದು, ಈ ಮೂಲಕ ಹೊಸ ಕೃಷಿ ಉದ್ಯಮ ಆರಂಭಿಸಲು ಕೇಂದ್ರ ಸರಕಾರ ರೈತರಿಗೆ 15 ಲಕ್ಷ ರೂ ನೆರವು ನೀಡುತ್ತಿದೆ.
ವಾಸ್ತವವಾಗಿ ವ್ಯವಸಾಯದ ಜತೆಗೆ ಕೇಂದ್ರ ಸರಕಾರವೂ ರೈತರನ್ನು ಉದ್ದಿಮೆ ಆರಂಭಿಸಲು ಉತ್ತೇಜನ ನೀಡುತ್ತಿದ್ದು, ಕೃಷಿ ಉದ್ಯಮವನ್ನು ಪ್ರಾರಂಭಿಸಲು ಸರ್ಕಾರವು ರೈತರಿಗೆ 15 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತದೆ.
ಮೋದಿ ಸರ್ಕಾರವು ‘ಪಿಎಂ ಕಿಸಾನ್ ಎಫ್‌ಪಿಒ ಯೋಜನೆ'(PM Kisan FPO Scheme) ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗೆ (Farmer Producer Organization) ರೂ15 ಲಕ್ಷ ನೀಡಲಿದೆ. ಆದರೆ, ಈ ಯೋಜನೆಯ ಲಾಭ ಪಡೆಯಲು, 11 ರೈತರು ಒಟ್ಟಾಗಿ ಕಂಪನಿಯನ್ನು ರಚಿಸಬೇಕು. ಇದರಿಂದ ರೈತರಿಗೆ ಕೃಷಿ ಉಪಕರಣಗಳು, ರಸಗೊಬ್ಬರಗಳು, ಬೀಜಗಳು ಮತ್ತು ಔಷಧಗಳನ್ನು ಖರೀದಿಸಲು ಸುಲಭವಾಗುತ್ತದೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!
ಹೇಗೆ ಅರ್ಜಿಯನ್ನು ಸಲ್ಲಿಸಬೇಕು
ರಾಷ್ಟ್ರೀಯ ಕೃಷಿ ಮಾರುಕಟ್ಟೆಯ(National Agricultural Market) ಅಧಿಕೃತ ವೆಬ್‌ಸೈಟ್‌ಗೆ https://enam.gov.in/web/ ಭೇಟಿ ನೀಡಿ. ಮುಖಪುಟದಲ್ಲಿ ನೀಡಿರುವ FPO ಆಯ್ಕೆಯನ್ನು ಕ್ಲಿಕ್ ಮಾಡಿ. ನೋಂದಣಿ (Registration) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಇದರ ನಂತರ ಪಾಸ್‌ಬುಕ್ ಅಥವಾ ರದ್ದಾದ ಚೆಕ್ ಅನ್ನು ಅಪ್‌ಲೋಡ್ ಮಾಡಿ. ಅದರ ನಂತರ ಫಾರ್ಮ್ ಅನ್ನು ಸಲ್ಲಿಸಿ.
ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಈಗೆ ಲಾಗಿನ್ ಆಗಿ
ಇನ್ನು, ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ https://enam.gov.in/web/ ಭೇಟಿ ನೀಡಿ. ಇದರ ನಂತರ ಮುಖಪುಟದಲ್ಲಿ ನೀಡಲಾದ FPO ಆಯ್ಕೆಯನ್ನು ಕ್ಲಿಕ್ ಮಾಡಿ. ಲಾಗಿನ್ ಫಾರ್ಮ್ ಅನ್ನು ತೆರೆದ ನಂತರ ಬಳಕೆದಾರ ಹೆಸರು ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಇದು ನಿಮ್ಮನ್ನು ಲಾಗ್ ಇನ್ ಮಾಡುತ್ತದೆ.
ಇದನ್ನು ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಡಿ ಪ್ರತಿಯೊಬ್ಬರಿಗೂ 50 ಸಾವಿರ ಉಚಿತ, ಕೂಡಲೇ ಅರ್ಜಿ ಸಲ್ಲಿಸಿ!