ಬೆಂಗಳೂರು : ವಾಹನ ಸವಾರರೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲಾಗುವುದು ಎಂದು ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯವು ಆದೇಶ ಹೊರಡಿಸಿದೆ.
ಹೌದು ಈ ಕುರಿತು ಆದೇಶ ಹೊರಡಿಸಿರುವ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲ, ಅತಿ ವೇಗದ ಚಾಲನೆ ಮೂಲಕ ಸಿಕ್ಕಿಬಿದ್ದ ಮೊದಲ ಅಪರಾಧಕ್ಕೆ 5000 ರೂ. ದಂಡ ಮತ್ತು 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಅನಂತರ, ಮತ್ತೆ ನಿಯಮ ಉಲ್ಲಂಘಿಸಿದಾಗ 10,000 ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದಿದೆ.
ಅಷ್ಟೇ ಅಲ್ಲದೆ ವಾಹನ ಸವಾರ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದರೆ, ಮೊದಲ ಬಾರಿಗೆ 10,000 ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ. ನಂತರ, ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದರೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದೆ.