ವಿಜಯಪುರ: ಕೆಪಿಎಸ್ ಸಿ ಆಯೋಗವು ನಡೆಸಿದ ಎಫ್ ಡಿಎ ಪರೀಕ್ಷೆಯ ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಸೋರಿಕೆ ಮಾಡಿದ್ದ ಹಿನ್ನೆಲೆ ವಿಜಯಪುರದ ಜೆಎಸ್ಎಸ್ ಕಾಲೇಜಿನ ಜವಾನ ಹಾಗೂ ನಕಲು ಮಾಡಿದ್ದ ಓರ್ವ ಅಭ್ಯರ್ಥಿಯನ್ನು ಗಾಂಧಿ ಚೌಕ್ ಠಾಣೆ ಪೊಲೀಸರು ಇಂದು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ವಿಜಯಪುರದ ಜೆಎಸ್ಎಸ್ ಕಾಲೇಜಿನ ಜವಾನ ನಕಲು ತಂದುಕೊಟ್ಟಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿ ಪರೀಕ್ಷಾರ್ಥಿಗಳು ಬೆಳಗ್ಗೆ ಧರಣಿ ನಡೆಸಿದ್ದರು. ತರುವಾಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಇನ್ನು ಇತ್ತೀಚಿಗೆ FDA ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಮುಂದೂಡಲಾಗಿದ್ದ ಪರೀಕ್ಷೆಯನ್ನು, ಇಂದು FDA ಪರೀಕ್ಷೆ ನಡೆಸಲಾಗಿದ್ದು, ಈಗ ಫ್ ಡಿಎ ಪರೀಕ್ಷೆಯ ಸಾಮಾನ್ಯ ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಸೋರಿಕೆಯಾಗಿದ್ದು ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದೆ.