ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸ್ವಯಂ ಘೋಷಣೆ ಪತ್ರ ಕಡ್ಡಾಯ ಮಾಡಿರುವುದನ್ನು ಸಡಿಲಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಫಲಾನುಭವಿಗಳು ಪ್ರತಿ ತಿಂಗಳು ನನಗೆ ಇನ್ನೂ ಉದ್ಯೋಗ ದೊರೆತಿಲ್ಲ ಎಂದು ಆನ್ಲೈನಲ್ಲಿ ಸ್ವಯಂ…

ಬೆಂಗಳೂರು: ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸ್ವಯಂ ಘೋಷಣೆ ಪತ್ರ ಕಡ್ಡಾಯ ಮಾಡಿರುವುದನ್ನು ಸಡಿಲಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಫಲಾನುಭವಿಗಳು ಪ್ರತಿ ತಿಂಗಳು ನನಗೆ ಇನ್ನೂ ಉದ್ಯೋಗ ದೊರೆತಿಲ್ಲ ಎಂದು ಆನ್ಲೈನಲ್ಲಿ ಸ್ವಯಂ ಘೋಷಣೆ ಮಾಡಿ ಅಪ್ಲೋಡ್ ಮಾಡಬೇಕಿದೆ.

ಇಲ್ಲದಿದ್ದರೆ ಅಂತವರ ಖಾತೆಗೆ ಹಣ ಪಾವತಿಸುವುದಿಲ್ಲ. ಘೋಷಣೆ ಕಡ್ಡಾಯ ಮಾಡಿರುವುದರಿಂದ ಸಾಫ್ಟ್ವೇರ್ ನಲ್ಲಿ ಡಿಬಿಟಿ ಮೂಲಕ ಹಣ ಪಾವತಿ ವಿಳಂಬವಾಗುತ್ತಿದೆ.

Vijayaprabha Mobile App free

ಪ್ರತಿ ತಿಂಗಳ ಬದಲು ಎರಡು ಮೂರು ತಿಂಗಳಿಗೊಮ್ಮೆ ಘೋಷಣಾ ಪತ್ರ ಪಡೆದುಕೊಳ್ಳುವುದು ಉತ್ತಮ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸೂಚನೆ ನೀಡಿದ್ದಾರೆ.

3,02,373 ಫಲಾನುಭವಿಗಳಿಗೆ 90.68 ಕೋಟಿ ರೂ. ಪಾವತಿಸಲಾಗಿದೆ. ಪತ್ರ ನೀಡದ ಕಾರಣಕ್ಕಾಗಿ 50 ಸಾವಿರ ಮಂದಿಗೆ ಹಣ ಪಾವತಿಯಾಗಿಲ್ಲ. ಯುವನಿಧಿ ಯೋಜನೆಯಡಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಮತ್ತು ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.