ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮದುವೆ ಸಂಭ್ರಮದ ಜೋರಾಗಿದ್ದು, ಅರಿಶಿನ ಶಾಸ್ತ್ರ ಕೂಡ ಅದ್ಧೂರಿಯಾಗಿ ನಡೆದಿದೆ. ವೈಟ್ ವೇಸ್ಕೋಟ್ ನಲ್ಲಿ ತರುಣ್ ಮಿಂಚುತ್ತಿದ್ರು.
ನಟಿ ಸೋನಲ್ ಕೂಡ ವೈಟ್ ಆ್ಯಂಡ್ ಎಲ್ಲೋ ಡಿಸೈನ್ ಡ್ರೆಸ್ನಲ್ಲಿ ಚೆಂದದ ಗೊಂಬೆಯಂತೆ ಕಂಗೊಳಿಸುತ್ತಿದ್ರು. ಕುಟುಂಬಸ್ಥರು ಈ ಜೋಡಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ್ರು. ತರುಣ್, ಸೋನಲ್ ಅರಿಸಿನ ಶಾಸ್ತ್ರದಲ್ಲಿ ಕುಟುಂಬಸ್ಥರು, ಸ್ನೇಹಿತರು ಕೂಡ ಭಾಗಿಯಾಗಿದ್ರು. ಯಲಹಂಕದ ಬಳಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಅರಿಶಿನ ಶಾಸ್ತ್ರ ನಡೆಯಿತು. ನೆನಪಿರಲಿ ಪ್ರೇಮ್, ಶರಣ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿದ್ರು. ತರುಣ್ ಹಾಗೂ ಸೋನಲ್ ಮದುವೆ ಎರಡು ದಿನ ಪ್ಲ್ಯಾನ್ ಆಗಿದೆ. ಆಗಸ್ಟ್-10 ರಂದು ಸಂಜೆ 6 ಗಂಟೆ ಹೊತ್ತಿಗೆ ರಿಸೆಪ್ಷನ್ ಇದೆ. ಮರು ದಿನ ಬೆಳ್ಳಗೇನೆ 10 ಗಂಟೆಗೆ ಮದುವೆ ನೆರವೇರಲಿದೆ. ತರುಣ್ ಸುಧೀರ್ ಕುಟುಂಬಸ್ಥರ ಸಂಪ್ರದಾಯದಂತೇನೆ ಇಲ್ಲಿ ಎಲ್ಲವೂ ಪ್ಲ್ಯಾನ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment