ನವದೆಹಲಿ: ದೇಶಾದ್ಯಂತ ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳಾಗಿರುವ ಸ್ವಿಗ್ಗಿ ಮತ್ತು ಝೊಮ್ಯಾಟೋಗಳು ವ್ಯಾಪಾರದಲ್ಲಿ ತಾರತಮ್ಯವನ್ನು ಮಾಡುತ್ತಿವೆ. ಕೆಲ ನಿರ್ದಿಷ್ಟ ರೆಸ್ಟೋರೆಂಟ್‌ಗಳಿಗೆ ಉತ್ತೇಜನ ನೀಡುವ ಮೂಲಕ ನ್ಯಾಯ ಸಮ್ಮತವಲ್ಲದ ಉದ್ಯಮವನ್ನು ನಡೆಸುತ್ತಿದೆ ಎಂದು ದೇಶದ ಸ್ಪರ್ಧಾ ಆಯೋಗ (ಸಿಸಿಐ) ವರದಿ ನೀಡಿದೆ.
ಸ್ವಿಗ್ಗಿ ಮತ್ತು ಝೊಮ್ಯಾಟೋಗಳ ತಾರತಮ್ಯ ನೀತಿ ಬಗ್ಗೆ ಭಾರತೀಯ ರೆಸ್ಟೋರೆಂಟ್ ಅಸೋಸಿಯೇಷನ್ (ಎನ್‌ಆರ್‌ಎ) ಸಲ್ಲಿಸಿದ್ದ ದೂರಿನ ಅನ್ವಯ 2022ರಲ್ಲಿ ಸಿಸಿಐ ಸ್ವಿಗ್ಗಿ, ಝೊಮ್ಯಾಟೋಗಳ ವ್ಯಾಪಾರದಲ್ಲಿನ ತಾರತಮ್ಯ ನೀತಿಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ತನಿಖೆಯ ವರದಿ ಸಲ್ಲಿಕೆಯಾಗಿದ್ದು, ಈ ಎರಡೂ ಸಂಸ್ಥೆಗಳು ವ್ಯಾಪಾರದಲ್ಲಿ ತಾರತಮ್ಯ ಮಾಡುತ್ತಿದ್ದು, ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ವರದಿಯಲ್ಲಿ ಸ್ವಿಗ್ಗಿ, ಝೊಮ್ಯಾಟೋಗಳು ಕೆಲ ರೆಸ್ಟೋರೆಂಟ್‌ಗಳಿಗೆ ಆದ್ಯತೆಯ ಸೇವೆ ನೀಡುತ್ತಿವೆ. ವ್ಯಾಪಾರ ವಿರೋಧಿಯಲ್ಲಿ ತೊಡಗಿಕೊಂಡಿದ್ದು, ಸ್ಪರ್ಧಾ ನಿಯಮಗಳನ್ನು ಉಲ್ಲೇಖಿಸಿರುವುದು ಸ್ಪಷ್ಟವಾಗಿದೆ ಎಂದಿದೆ.