ಜಮೀರ್‌ನನ್ನು ಸಂಪುಟದಿಂದ ವಜಾ ಮಾಡಿ: ರಾಜ್ಯಪಾಲರಿಗೆ ವಿಜಯೇಂದ್ರ ಆಗ್ರಹ

ರಾಮನಗರ: ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಸಚಿವ ಸ್ಥಾನದ ಘನತೆಗೆ ತುಕ್ಕು ಹಿಡಿಸುತ್ತಿರುವ ಜಮೀರ್ ಅಹಮದ್‌ ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ…

B Y Vijayendra

ರಾಮನಗರ: ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಸಚಿವ ಸ್ಥಾನದ ಘನತೆಗೆ ತುಕ್ಕು ಹಿಡಿಸುತ್ತಿರುವ ಜಮೀರ್ ಅಹಮದ್‌ ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ ಗೂಡನ್ನಾಗಿಸಲು ಪಣ ತೊಟ್ಟಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮದ್ ಅವರು ಇದೀಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ಭರದಲ್ಲಿ ಸಂಸ್ಕೃತಿ ಹೀನರಂತೆ ವರ್ತಿಸಿದ್ದಾರೆ. ನಾಗರಿಕ ಪರಿಭಾಷೆಯ ಪರಿಚಯವೇ ಇಲ್ಲದಂತೆ ಮಾತನಾಡುವ ಜಮೀರ್ ಅವರ ವರ್ತನೆ ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಭಾಷಣ ಮಾಡುವ ವೇಳೆ ಅವರು ಬಳಸಿರುವ ಪದಪುಂಜಗಳು ಫುಟ್‌ಪಾತ್ ಪೋಕರಿಗಳನ್ನೂ ನಾಚಿಸುವಂತಿದೆ. ಇಂಥವರನ್ನು ಸಚಿವರನ್ನಾಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇತ್ತೀಚೆಗೆ ತಮ್ಮ ಹತಾಶೆಯ ಮನಸ್ಥಿತಿಯಿಂದ ಭಂಡ ಸಮರ್ಥನೆಗಿಳಿದು ಮಾಧ್ಯಮದವರ ಮೇಲೆ ಎರಗಿ ಬೀಳುತ್ತಿದ್ದಾರೆ. ಜಮೀರ್ ಅಹಮದ್ ಅವರು ಮುಸಲ್ಮಾನರನ್ನು ಎತ್ತಿ ಕಟ್ಟುವುದು, ಸಮಾಜದಲ್ಲಿ ವಿಧ್ವಂಸಕ ಸ್ಥಿತಿ ನಿರ್ಮಾಣ ಮಾಡುವುದು ತಮ್ಮ ಗುರಿ ಎಂದು ಭಾವಿಸಿದಂತಿದೆ. ಇಂತಹ ವರ್ತನೆಗಳನ್ನು ಕಾಂಗ್ರೆಸ್‌ ಪಕ್ಷ ಕೂಡ ವ್ಯವಸ್ಥಿತವಾಗಿ ನೀರೆರೆದು ಪೋಷಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.

Vijayaprabha Mobile App free

ಚನ್ನಪಟ್ಟಣದ ಮತದಾರರು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಹೀನಾಯವಾಗಿ ಸೋಲಿಸುವ ಮೂಲಕ ಬುದ್ಧಿ ಕಲಿಸಲು ಸಂಕಲ್ಪ ತೊಟ್ಟಿದ್ದಾರೆ. ಈಗಾಗಲೇ ಜಮೀರ್ ಅಹಮದ್ ಅವರ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ಸಿನ ಹಲವಾರು ಶಾಸಕರು ಉಪಚುನಾವಣೆ ಮುಗಿಯುವುದಷ್ಟನ್ನೇ ಕಾಯುತ್ತಿದ್ದಾರೆ. ಜನ ಬುದ್ಧಿ ಕಲಿಸುವ ಮುನ್ನವೇ ಕಾಂಗ್ರೆಸ್ ಪಕ್ಷವು ಜಮೀರ್ ಅಹಮದ್ ಅವರಂಥ ಮನಸ್ಥಿತಿ ಇರುವ ವ್ಯಕ್ತಿಗಳ ಭಾರಕ್ಕೆ ತನ್ನಷ್ಟಕ್ಕೆ ತಾನೆ ಕುಸಿದು ನೆಲ ಕಚ್ಚಲಿದೆ. ತುಷ್ಟೀಕರಣ ರಾಜಕಾರಣ ಒಂದೇ ತಮ್ಮ ಬ್ರಹ್ಮಾಸ್ತ್ರ ಎಂದು ತಿಳಿದಿರುವ ಕಾಂಗ್ರೆಸ್ ಪಕ್ಷದ ಅಮಲು ಇಳಿಸುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಉಪಚುನಾವಣೆಗಳ ಫಲಿತಾಂಶ ಅದಕ್ಕೆ ಮುನ್ನುಡಿ ಬರೆಯಲಿದೆ ಎಂದು ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.