ತಿಕೋಟಾ : ಬಸವಾದಿ ಶರಣರು ಬದುಕಿ ಹೋದ ರೀತಿಯೇ ವಿಶಿಷ್ಟವಾದುದ್ದು, ವಿಚಾರಗಳು, ಜೀವನ ಶೈಲಿ ಎಲ್ಲವೂ ಸರಳ ಹಾಗೂ ಆಕರ್ಷಕವಾಗಿದ್ದವು.
ಶರಣರ ಒಂದೊಂದು ವಿಚಾರಗಳೂ ವಿನೂತನವಾಗಿದ್ದು, ಇಂದಿಗೂ ಅವರ ನಡೆ-ನುಡಿಗಳು ಅಧ್ಯಯನಯೋಗ್ಯವಾಗಿವೆ. ಹಂಗಿನ ಅರಮನೆಗಿಂತ ದುಡಿಮೆಯ ಗುಡಿಸಲು ಶ್ರೇಷ್ಠ ಎಂದು ನಂಬಿ ಬದುಕಿದವರು ಅಂತ ಶ್ರೇಷ್ಠ ಶರಣರಲ್ಲಿ ಹೊನವಾಡದ ಸಂಗಮೇಶ ಶರಣರು ಕೂಡ ಒಬ್ಬರು.
ಎಲೆ ಮರೆ ಕಾಯಿಯಂತೆ ಮರೆಯಲ್ಲೇ ಇದ್ದುಕೊಂಡೆ ಹಲವಾರು ಪವಾಡಗಳನ್ನು ಮಾಡಿದವರು ಕಾಲಜ್ಞಾನವನ್ನು ಮಂಡಿಸಿದವರು ನುಡಿದಂತೆ ನಡೆದವರು.
ಶ್ರೀ ಸಂಗಮೇಶ ಶರಣರ ತಪೋಭೂಮಿ, ಭಕ್ತರ ಕಾಮದೇನು ಕಲ್ಪವೃಕ್ಷ, ತೀರ್ಥ ಸ್ಥಳ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಪಚ್ಚಿಮ ದಿಕ್ಕಿನಲ್ಲಿರುವ ಜಿಳಿ ಜಿಳಿ ಸುಕ್ಷೇತ್ರದಲ್ಲಿ ಇಂದು ಪುಷ್ಪಾರ್ಚನೆ ಜರುಗಿತು ಶಂಕರಲಿಂಗ ಭಜನಾ ತಂಡದಿಂದ ಭಜನೆ ಜರುಗಿತು
ಈ ಕಾರ್ಯಕ್ರಮದಲ್ಲಿ ನಚಿಕೇತಸ್ವಾಮಿಗಳು ಹಿರೇಮಠ್ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಶ್ರೀಶೈಲ ಗಣಾಚಾರಿ ಮಾತೋಶ್ರೀ ಈರಮ್ಮ ಶರಣಮ್ಮನವರ ಅಕ್ಕನ ಬಳಗದವರು ಬಿಜ್ಜರಗಿ ಹೊನವಾಡ ತೊದಲಬಾಗಿ ತಿಗಣಿಬಿದರಿ ತೆಲಸಂಗ ಗ್ರಾಮದ ಸರ್ವ ಧರ್ಮಿಯರು ಜಾತ್ಯತೀತವಾಗಿ ಭಾಗವಹಿಸಿದರು.