Sumalata Ambarish birthday: ಸ್ಯಾಂಡಲ್ ವುಡ್ ನ ಬಹುಭಾಷ ನಟಿ ಹಾಗೂ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalta Ambarish) 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅವರು, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ನಟಿಯಾಗಿ ಗುರುತಿಸಿಕೊಂಡವರು ಸುಮಲತಾ ಅಂಬರೀಷ್. ಕನ್ನಡ , ಮಲಯಾಲಂ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿದ್ದರು.
ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಮಲತಾ ಅಂಬರೀಶ್
ರಾಜಕೀಯಕ್ಕೆ ಬರುವ ಮುನ್ನ ಸಿನಿಮಾರಂಗದಲ್ಲಿ ವಿಶೇಷವಾಗಿಯೇ ಗಮನ ಸೆಳೆದ ಸುಮಲತಾ ಅಂಬರೀಶ್ ಅವ್ರು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ. ಸುಮಾರು 220 ಸಿನಿಮಾಗಳನ್ನ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ. ಎಲ್ಲ ಭಾಷೆಯ ಸ್ಟಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗ ಸಿನಿಮಾಗಿಂತಲೂ ಹೆಚ್ಚಾಗಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಮದುವೆಗೂ ಮುನ್ನ ಸುಮಲತಾ ಗೆ ಫೋನ್ ಮಾಡಿ “ಹೌ ಆರ್ ಯು” ಅಂತ ಕೇಳುತ್ತಿದ್ದ ಅಂಬಿ
ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಜೋಡಿಯಲ್ಲಿ ಅಂಬಿ ಸುಮಲತಾ ಜೋಡಿ ಕೂಡ ಒಂದು. ಅಂಬಿ ಬಗ್ಗೆ ಸುಮಲತಾ ಹೇಳಿದ್ದು ಹೀಗೆ.. ನಾವು ಮೊದಲು 1984ನಲ್ಲಿ ಭೇಟಿಯಾಗಿದ್ದೇವು. ನಂತರ 1991ರಲ್ಲಿ ಮದುವೆಯಾಗಿದ್ದವು. ಆ ಮಧ್ಯೆ ಎರಡು ಮೂರು ವರ್ಷದಲ್ಲಿ ಯಾವುದೇ ಸಿನಿಮಾವನ್ನು ಮಾಡಿರಲಿಲ್ಲ. ನಾನು ಚೆನ್ನೈನಲ್ಲಿದ್ದರೆ, ಅವರು ಬೆಂಗಳೂರಿನಲ್ಲಿದ್ದರು. ಆ ಕಾಲದಲ್ಲಿ ಮೊಬೈಲ್ ಕೂಡ ಇರಲಿಲ್ಲ. ಯಾವಾಗ್ಲಾದ್ರೂ ಅವರು ಬೆಂಗಳೂರಿನಿಂದ ಚೆನ್ನೈಗೆ ಬಂದಾಗ ಫೋನ್ ಮಾಡಿ ‘ಹೌ ಆರ್ ಯೂ’ ಎಂದು ಕೇಳುತ್ತಿದ್ದರು.
ಅಂಬಿ, ಸುಮಲತಾ ಅವರ ಕ್ಯೂಟ್ ಲವ್ ಸ್ಟೋರಿ ಹೇಗಿತ್ತು ಗೊತ್ತಾ..?
ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಅಂಬಿ ಸುಮಲತಾ ಜೋಡಿ ಕೂಡ ಒಂದು. ಆಹುತಿ ಚಿತ್ರದ ಶೂಟಿಂಗ್ ನಲ್ಲಿ ಫಸ್ಟ್ ಟೈಮ್ ಮೀಟ್ ಮಾಡಿದ ಅಂಬಿ ಮತ್ತು ಸುಮಲತಾ. ಮೊದಲ ಪರಿಚಯದಲ್ಲಿ ಸ್ನೇಹ ಹುಟ್ಟಿ ತದನಂತರ ಪ್ರೀತಿ ಶುರುವಾಯಿತು. ನ್ಯೂ ಡೆಲ್ಲಿ ಸಿನಿಮಾದ ಸಮಯದಲ್ಲಿ ಹುಟ್ಟಿದ ಪ್ರೇಮ್ ಕಹಾನಿ. ಅಂಬಿ ಅವರದ್ದು ಫ್ರೆಂಡ್ಲಿ ಹಾಗೂ ಓಪನ್ ಹಾರ್ಟೆಡ್ ಪರ್ಸನ್ ಎಂದು ಸುಮಲತಾಗಿ ನಿಧಾನವಾಗಿ ಅರ್ಥವಾಯಿತಂತೆ. ಸುಮಾರು ಎರಡು ವರ್ಷ ಪ್ರೀತಿಯ ನಂತರ 1991ರಲ್ಲಿ ಮದುವೆಯಾದರು. ಅಂಬಿಗೆ ಮದುವೆಯಾದಾಗ 39 ವರ್ಷ ಆಗಿತ್ತಂತೆ.
ಸುಮಲತಾ ಜೊತೆ ಮದುವೆಗೆ ಅಂಬಿ ಮನೆಯಲ್ಲಿ ಒಪ್ಪಿದ್ದು ಹೇಗೆ..!
ತಮ್ಮ ಲವ್ ಸ್ಟೋರಿ ಕುರಿತು ಸುಮಲತಾ ಅಂಬರೀಶ್ ಸಂದರ್ಶನ ಒಂದರಲ್ಲಿ ಹೀಗೆ ಹೇಳಿದ್ದರು. ನಮ್ಮ ಮದುವೆಯಾದಾಗ ಅವರಿಗೆ 39 ವರ್ಷವಾಗಿತ್ತು. ಒಮ್ಮೆ ಮದುವೆಯಾಗಲಿ. ಇವರು ಮದುವೆಯಾದರೆ ಸಾಕು ಎಂದು ಅವರ ತಾಯಿ ಹೇಳುತ್ತಿದ್ದರು. ನಮಗೆ ಗಂಡು ಮಗು ಆಗುತ್ತೆ ಎಂದು ಅವರ ತಾಯಿ ಹೇಳುತ್ತಿದ್ದರು. ಅಂಬರೀಶ್ ಮಗುವನ್ನು ನೋಡಿದ ಮೇಲೆ ನಾನು ನಿಧನರಾಗಬೇಕು ಎಂದು ಅವರ ತಾಯಿಯ ಆಸೆ ಆಗಿತ್ತು. ಕೊನೆಗೆ ಅದೇ ರೀತಿ ಆಯಿತು ಎಂದು ಸುಮಲತಾ ತಿಳಿಸಿದ್ದಾರೆ.
ಸುಮಲತಾ ಅಂಬರೀಶ್ ಮೇಲೆ ಪುನೀತ್ ರಾಜಕುಮಾರ್ ಗೆ ಫುಲ್ ಕ್ರಶ್..!
ಅಪ್ಪು ಚಿಕ್ಕವಯಸ್ಸಿನಲ್ಲಿದ್ದಾಗ ಸುಮಲತಾ ಅಂಬರೀಶ್ ಮೇಲೆ ಕ್ರಶ್ ಇತ್ತಂತೆ. ಸುಮಲತಾ ಅಂದ್ರೆ ಅಪ್ಪುಗೆ ಏನೋ ಒಂದು ಖುಷಿ ನೋಡಿ. ಮನೆಗೆ ಬಂದು ಅಮ್ಮ ನಾನು ಸುಮಲತಾಳನ್ನ ಮದುವೆ ಆಗುತ್ತೇನೆ ಅಂತಲೇ ಹೇಳಿದ್ದರು. ಈ ಒಂದು ಮಾತನ್ನ ಇಟ್ಟುಕೊಂಡು ರೆಬಲ್ ಸ್ಟಾರ್ ಅಂಬರೀಶ್ ಪುನೀತ್ ರಾಜಕುಮಾರ್ ಗೆ ಕಾಲೆಳೆದದ್ದು ನೋಡಬಹುದು. ಅಪ್ಪು ಚಿಕ್ಕವಯಸ್ಸಿನಲ್ಲೇ ನನಗೆ ಪ್ರಪೋಸ್ ಮಾಡಿದ್ದರು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್ ಹೇಳಿದ್ದರು.
2019ರಲ್ಲಿ ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಸಂಸದೆಯಾಗಿ ಆಯ್ಕೆ..!
ಸುಮಲತಾ ಬಹುಭಾಷ ನಟಿಯಾಗಿ ಮಿಂಚಿದ್ದಲ್ಲದೆ ಅಂಬರೀಶ್ ಅವರಂತೆ ರಾಜಕೀಯದಲ್ಲೂ ಯಶಸ್ಸು ಕಂಡಿದ್ದರು. ಅಂಬರೀಷ್ ನಂತರ ಸುಮಲತಾ ಕೂಡ ಅದೇ ಹಾದಿಯಲ್ಲಿ ಸಾಗಿದರು. 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಭರ್ಜರಿ ಜಯಭೇರಿ ಬಾರಿಸಿದ್ದರು. ತೀವ್ರ ಪೈಪೋಟಿ ಇದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರ ಕೈ ಹಿಡಿದಿದ್ದು ಅವರ ಅಭಿಮಾನಿಗಳು. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
https://vijayaprabha.com/last-date-for-ration-card-ekyc/