ದಿಸ್ಪುರ್: ಅಸ್ಸಾಂ ಮಾಜಿ ಸಿಎಂ & ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೊಯಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು 86ನೇ ವಯಸ್ಸಿನಲ್ಲಿ ಗುವಾಹಟಿ ವೈದ್ಯಕೀಯ ಕಾಲೇಜು & ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೊಯಿ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಅವರನ್ನು ಸಂಪೂರ್ಣವಾಗಿ ಲೈಫ್ ಸಪೋರ್ಟ್ ಸಿಸ್ಟಮ್ ನಲ್ಲಿಡಲಾಗಿದೆ ಎಂದು ವೈದ್ಯರು ಇಂದಷ್ಟೇ ಮಾಹಿತಿ ನೀಡಿದ್ದರು.
ಅಸ್ಸಾಂ ಮಾಜಿ ಸಿಎಂ & ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೊಯಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೆಪಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಾಯಕ ತರುಣ್ ಗೊಗೊಯಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಕಂಬನಿ
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ಶ್ರೀ ತರುಣ್ ಗೊಗೊಯ್ ಅವರು ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರರಾಗಿದ್ದರು, ಅವರು ಅಸ್ಸಾಂ ಮತ್ತು ಕೇಂದ್ರದಲ್ಲಿ ಹಲವಾರು ವರ್ಷಗಳ ರಾಜಕೀಯ ಅನುಭವವನ್ನು ಹೊಂದಿದ್ದರು. ಅವರು ನಿಧನಕ್ಕೆ ತುಂಬಾ ದುಃಖಿತನಾಗಿದ್ದು, ಈ ಗಂಟೆಯಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ಇವೆ ಎಂದು ಹೇಳಿದ್ದು, ಓಂ ಶಾಂತಿ ಟ್ವೀಟ್ ಮಾಡಿದ್ದಾರೆ
Shri Tarun Gogoi Ji was a popular leader and a veteran administrator, who had years of political experience in Assam as well as the Centre. Anguished by his passing away. My thoughts are with his family and supporters in this hour of sadness. Om Shanti. pic.twitter.com/H6F6RGYyT4
— Narendra Modi (@narendramodi) November 23, 2020
ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ತರುಣ್ ಗೊಗೊಯ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪ. ಅಸ್ಸಾಂನ ಸುದೀರ್ಘ ಅವಧಿಯ ಸಿಎಂ ಆಗಿ ಅವರು ರಾಜ್ಯದ ದಿಕ್ಕನ್ನು ಸಕಾರಾತ್ಮಕವಾಗಿ ಬದಲಿಸುವ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಿದರು ಎಂದು ಹೇಳಿದ್ದಾರೆ.
Deeply saddened by the demise of Former Chief Minister of Assam and Senior Congress leader Shri. Tarun Gogoi.
My condolences to his bereaved family. As the longest serving CM of Assam, he positively changed the face of the state and put it on a path of development. pic.twitter.com/QSDpMs1WeY
— DK Shivakumar (@DKShivakumar) November 23, 2020