13 ಭಾಷೆಗಳಲ್ಲಿ ಮಾರ್ಟಿನ್‌ ಅಬ್ಬರ: ಧ್ರುವ ಸರ್ಜಾ ಅಭಿನಯಕ್ಕೆ ಪ್ರೇಕ್ಷಕ ಫಿದಾ !

Martin kannada movie review: ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಇಂದು ತೆರೆ ಕಂಡಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಇಂದು ಆಯುಧ ಪೂಜೆ ಭರಾಟೆ ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರಮಂದಿರಗಳಲ್ಲಿ ಮಾರ್ಟಿನ್‌ ಭಾರೀ…

Martin kannada movie review

Martin kannada movie review: ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಇಂದು ತೆರೆ ಕಂಡಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಇಂದು ಆಯುಧ ಪೂಜೆ ಭರಾಟೆ ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರಮಂದಿರಗಳಲ್ಲಿ ಮಾರ್ಟಿನ್‌ ಭಾರೀ ಸದ್ದು ಮಾಡುತ್ತಿದ್ದಾನೆ.

ವಿಶ್ವಾದ್ಯಂತ ಸುಮಾರು 3000 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಒಟ್ಟು 13 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ 350ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಮಾರ್ಟಿನ್ ಅಬ್ಬರಿಸುತ್ತಿದ್ದಾನೆ.

Read Also: ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್​

Vijayaprabha Mobile App free

ಮಾರ್ಟಿನ್‌ ಸಿನಿಮಾಗೆ ಕನ್ನಡ ಚಿತ್ರರದಂಗದ ಬೆಂಬಲ (Martin kannada movie review)

ಮೊದಲ ದಿನವೇ ಬಾಕ್ಸ್‌ ಆಫೀಸ್‌ ಗೆ ಲಗ್ಗೆ ಇಟ್ಟಿರುವ ಮಾರ್ಟಿನ್‌ ಚಿತ್ರ್ಕೆ ಕನ್ನಡ ಚಿತ್ರರಂಗದ ಘಟಾನುಘಟಿ ನಾಯಕರು ಶುಭಕೋರಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ, ನಿರ್ದೇಶಕ ಆರ್‌ ಚಂದ್ರು ಸೇರಿ ಹಲವರು ಶುಭ ಸಂದೇಶ ಕಳುಹಿಸಿದ್ದಾರೆ.

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಫ್ಯಾನ್ ಇಂಡಿಯಾ ಚಿತ್ರ, ಮಾರ್ಟಿನ್ ಇಂದು ಪ್ರಪಂಚದಾದ್ಯಂತ ಬಿಡುಗಡೆ, ಆಗಿದ್ದು ಧ್ರುವ ಸರ್ಜಾ ರವರಿಗೆ, ಚಿತ್ರದ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಸರ್ ಮತ್ತು ನಿರ್ದೇಶಕರಾದ AP ಅರ್ಜುನ್ ರವರಿಗೆ ಯಶಸ್ಸು ಸಿಗಲಿ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಲಿ. ಪ್ರೀತಿಯಿಂದ ಆರ್ ಚಂದ್ರು

ಮಾರ್ಟಿನ್ ಚಿತ್ರ ಬೆಳ್ಳಿಪರದೆಯ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಲಿ. ಶುಭಹಾರೈಕೆಗಳು.
Rishab Shetty

ಧ್ರುವ ಸರ್ಜಾ ಅಭಿನಯಕ್ಕೆ ಪ್ರೇಕ್ಷಕ ಫಿದಾ

ಇನ್ನು ನಾಯಕ ನಟ ಧ್ರುವ ಸರ್ಜಾ ಅವರ ಅಬ್ಬರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್‌ ಆಗುತ್ತಿವೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.