ಬಳ್ಳಾರಿ ಜಪ ಮಾಡುತ್ತಿದ್ದವರು ಈಗೇಕೆ ಹೋಗಿಲ್ಲ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ

ಬೆಂಗಳೂರು: ಅಧಿಕಾರಕ್ಕೆ ಬರುವ ಮೊದಲು ಬಳ್ಳಾರಿ ಜಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು, ಅಲ್ಲಿ ಐವರು ಬಾಣಂತಿಯರ ಸಾವಾದರೂ ಏಕೆ ಬಳ್ಳಾರಿಯತ್ತ ಪಾದ ಬೆಳೆಸಿಲ್ಲ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು…

ಬೆಂಗಳೂರು: ಅಧಿಕಾರಕ್ಕೆ ಬರುವ ಮೊದಲು ಬಳ್ಳಾರಿ ಜಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು, ಅಲ್ಲಿ ಐವರು ಬಾಣಂತಿಯರ ಸಾವಾದರೂ ಏಕೆ ಬಳ್ಳಾರಿಯತ್ತ ಪಾದ ಬೆಳೆಸಿಲ್ಲ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸಾವೇ ಸಂಭವಿಸಿದರೂ ಒಬ್ಬರೇ ಒಬ್ಬರು ಅಲ್ಲಿಗೆ ತೆರಳುವ ಕನಿಷ್ಠ ಸೌಜನ್ಯ ತೋರಿಲ್ಲ ಎಂದು ಕಿಡಿ ಕಾರಿದರು.

ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವರು ಯಾರೊಬ್ಬರಿಗೂ ಈಗ ಬಳ್ಳಾರಿ ಜನರ ಅದರಲ್ಲೂ ಮಹಿಳೆಯರ ಜೀವ ರಕ್ಷಣೆ ಕಾರ್ಯ ಬೇಡವಾಯಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Vijayaprabha Mobile App free

ಆಡಳಿತದತ್ತ ಗಮನವಿಲ್ಲ ಸಿಎಂಗೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದ ಬಗ್ಗೆ ಗಮನವಿಲ್ಲ. ಮೂಡಾ ಹಗರಣದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಮುಂದಾಗಿ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಜೋಶಿ ಆರೋಪಿಸಿದರು.

ಕಳಪೆ ಐವಿ ದ್ರಾವಣವೇ ಬಾಣಂತಿಯರ ದುರಂತ ಸಾವಿಗೆ ಕಾರಣ:

ಬಳ್ಳಾರಿಯಲ್ಲಿ ಬಾಣಂತಿಯರ ದುರಂತ ಸಾವಿಗೆ ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಕಾರಣ. ಈ ಪ್ರಕರಣದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಐವಿ ದ್ರಾವಣ ಸ್ಯಾಂಪಲ್​​ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ನಿಜ. ಆದರೆ, ಬಳ್ಳಾರಿ ಬಿಟ್ಟರೆ ಪಕ್ಕದ ರಾಜ್ಯಗಳಲ್ಲಿ ಎಲ್ಲೂ ಈ ಸಮಸ್ಯೆ ಉದ್ಭವಿಸಿಲ್ಲ. ಸುಮ್ಮನೇ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಖಂಡಿಸಿದರು.

ತೆಲಂಗಾಣದಲ್ಲಿ ಕಾಂಗ್ರೆಸ್​ ಸರ್ಕಾರವೇ ಇದೆ. ಅಲ್ಲೇಕೆ ಈ ರೀತಿಯ ಸಮಸ್ಯೆ ಆಗಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ಸಿಗರು ಜವಾಬ್ದಾರಿಯಿಂದ ಮಾತನಾಡಲಿ ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿ ಕೆಲ ತಿಂಗಳುಗಳಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳ ಮರಣ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ಈ ಸರ್ಕಾರಕ್ಕೆ ಕಿಂಚಿತ್ತೂ ಜವಾಬ್ದಾರಿಯಿಲ್ಲ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ವರುವ ಮುನ್ನ ಬಳ್ಳಾರಿ ಬಗ್ಗೆ ಬಹಳ ಜಪ ಮಾಡುತ್ತಿದ್ದರು. ಆದರೆ, ಎಂದು ಅವರ ಸರ್ಕಾರ ಸಂವೇದನಾ ಶೀಲತೆಯನ್ನೇ ಕಳೆದುಕೊಂಡಿದೆ. ಬಾಣಂತಿಯರು ಸಾವಿಗೀಡಾಗುತ್ತಿದ್ದಾರೂ ಸಿಎಂ ಬಳ್ಳಾರಿಗೆ ತೆರಳಿಲ್ಲ ಎಂದು ಜೋಶಿ ಟೀಕಿಸಿದರು.

ಜನರ ಜೀವದ ಜತೆ ಚೆಲ್ಲಾಟ:

ಕಳಪೆ ಗುಣಮಟ್ಟದ ಐವಿ ದ್ರಾವಣ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಇರುವಂಥ ಭ್ರಷ್ಟಾಚಾರ, ಬೇಜವಾಬ್ದಾರಿ ಕಾರಣ ಎಂಡು ಆರೋಪಿಸಿದ ಸಚಿವ ಜೋಶಿ, ರಾಜ್ಯ ಸರ್ಕಾರ ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಹರಿಹಾಯ್ದರು.

ಸಿಎಂ ಹಿಂದೆ-ಮುಂದೆ ಓಡಾಡಿಕೊಂಡು ಇದ್ದಾರೆ ಆರೋಗ್ಯ ಸಚಿವರು: ಆರೋಗ್ಯ ಸಚಿವರು ಸಿಎಂ ಹಿಂದೆ-ಮುಂದೆಯೇ ಇರುತ್ತಾರೆ. ಇನ್ನು ಜಿಲ್ಲಾ ಉಸ್ತುವಾರಿ ಮಂತ್ರಿಯೂ ನಾಪತ್ತೆ ಆದಂತಿದೆ ಬಳ್ಳಾರಿ ಪಾಲಿಗೆ ಎಂದರು.

ಬಳ್ಳಾರಿ ಜಪ ಮಾಡುತ್ತಿದ್ದವರು ಈಗೇಕೆ ಹೋಗಿಲ್ಲ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.