ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ಫೇಸ್‌ಬುಕ್ ಲೈವ್ ಮೂಲಕ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಸದ್ಯ ಐದು ದಿನದ ಬಳಿಕ ಕೇಸ್ ನಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಕೊಲೆ ಆರೋಪಿ ತಬರೇಜ್ ಪಾಷಾ ಮೃತಪಟ್ಟಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವಾಗ 12ಅಡಿ ಎತ್ತರದಿಂದ ಜಿಗಿದು ಮೃತಪಟ್ಟಿದ್ದಾನೆ. ಕೌಟುಂಬಿಕ ವಿಚಾರಕ್ಕೆ ಸೈಯಿದಾ ಫಾಜೀಲ್ ಫಾತೀಮಾ(34) ತನ್ನ ಪತಿ ತಬರೇಜ್ ಪಾಷಾ ಜೊತೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಇದೇ ತಿಂಗಳ 2ರಂದು ಆರೋಪಿ ತಬರೇಜ್ ತನ್ನ ಅತ್ತೆಯ ಮನೆಗೆ ನುಗ್ಗಿ ಅತ್ತೆಯ ಎದುರೇ ಪತ್ನಿಯನ್ನು ಹತ್ತಾರು ಭಾರೀ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮನೆಗೆ ಬರುವ ಮುನ್ನ ಹಾಗೂ ಹತ್ಯೆ ವೇಳೆ ಫೇಸ್‌ಬುಕ್ ಲೈವ್ ಮಾಡಿ ಕೊಲೆ ಬಗ್ಗೆ ಲೈವ್ನಲ್ಲೇ ವಿವರಿಸಿದ್ದ. ಇನ್ನು ಕೊಲೆ ಬಳಿಕ ಕೋಲಾರಕ್ಕೆ ಎಸ್ಕೇಪ್ ಆಗಿದ್ದ. ಈ ಘಟನೆ ಸಂಬಂಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment