Kannada flag : ಇಂದು 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ನಾಡಿನೆಲ್ಲೆಡೆ ಕನ್ನಡ ಬಾವುಟ (Kannada flag) ಹಾರಾಡಲಿದೆ. ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದೆ.
ಕನ್ನಡ ಹೋರಾಟಗಾರ ಎಂ. ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣದಿಂದ ಕೂಡಿದ ಬಾವುಟವನ್ನು ಸಿದ್ಧಪಡಿಸಿದ್ದರು. ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತ ಆಗಿದೆ.
ಇದನ್ನೂ ಓದಿ: Kannada Rajyotsava : ಇಂದು ಕನ್ನಡ ರಾಜ್ಯೋತ್ಸವ ಆಚರಣೆ; ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕ
Kannada flag ಸಾಂವಿಧಾನಿಕ ಮಾನ್ಯತೆ ಇಲ್ಲ
ಕರ್ನಾಟಕದ ಧ್ವಜಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆತಿಲ್ಲವಾದರೂ, ಪ್ರತಿ ರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲಾಗುತ್ತದೆ. ಕನ್ನಡ ಧ್ವಜದಲ್ಲಿರುವ ಹಳದಿ ಬಣ್ಣವು ಅರಿಶಿನ, ಕೆಂಪು ಬಣ್ಣವು ಕುಂಕುಮದ ಶುಭ ಸಂಕೇತವನ್ನು ಪ್ರತಿನಿಧಿಸಲಿದ್ದು, ಕನ್ನಡಿಗರ ಮಂಗಳಕರ ಹಾಗೂ ಯೋಗ ಕ್ಷೇಮದ ಸಂಕೇತವಾಗಿದೆ.
Kannada flag : ಕನ್ನಡ ಧ್ವಜದ ಹುಟ್ಟು
ಸ್ವಾತಂತ್ರ್ಯ ನಂತರ ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಪ್ರಾಬಲ್ಯವಾಗಿದ್ದ ಸಮಯದಲ್ಲಿ, ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಎಂ. ರಾಮಮೂರ್ತಿ ಅವರು ಕನ್ನಡ ಬಾವುಟವನ್ನು ರಚಿಸಿದರು. ಗಾಂಧೀಜಿಯವರ ವಿಚಾರಧಾರೆಗಳಿಂದ ಚಳುವಳಿಯ ಹಾದಿ ಹಿಡಿದ ಸೀತಾರಾಮಶಾಸ್ತ್ರಿ ಅವರ ಪುತ್ರ ರಾಮಮೂರ್ತಿ ಅವರು.
ಇದನ್ನೂ ಓದಿ: Kannada Rajyotsava Award | ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024ರ ಪಟ್ಟಿ ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆ
Kannada flag ರಾಜ್ಯದ ಹೆಮ್ಮೆಯ ಸಂಕೇತ
ಕನ್ನಡ ಲೇಖಕ ಮತ್ತು ಹೋರಾಟಗಾರ ರಾಮಮೂರ್ತಿಯವರು, ಕನ್ನಡ ಪಕ್ಷಕ್ಕಾಗಿ ರಚಿಸಿದ ಕೆಂಪು & ಹಳದಿ ಧ್ವಜವು 1960 ರಿಂದ ನಾಡಧ್ವಜ ಎಂಬ ಅನಧಿಕೃತ ಸ್ಥಾನಮಾನ ಹೊಂದ್ದು, ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ದೊರೆಯದಿದ್ದರೂ, ಕನ್ನಡಿಗರು, ಕನ್ನಡಪರ ಹೋರಾಟಗಾರರು ಇದನ್ನು ರಾಜ್ಯದ ಹೆಮ್ಮೆಯ ಸಂಕೇತವಾಗಿ ಅಳವಡಿಸಿಕೊಂಡಿದ್ದಾರೆ.
ಶಾಂತಿ-ರಕ್ಷಣೆ, ತ್ಯಾಗ-ಕ್ರಾಂತಿ ಪ್ರತೀಕ
ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕವಾಗಿದ್ದು, ಕರ್ನಾಟಕ ಚಿನ್ನದ ಬೀಡು ಎನ್ನುವ ಖ್ಯಾತಿ ಗಳಿಸಿದೆ ಎನ್ನುವುದು ಹಳದಿ ಪ್ರತಿನಿಧಿಸಿದರೆ, ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ & ಕ್ರಾಂತಿಯ ಪ್ರತೀಕವಾಗಿದೆ ಎಂದು ರಾಮಮೂರ್ತಿಯವರೇ ಧ್ವಜ ರಚನೆ ಸಮಾವೇಶದಲ್ಲಿ ಸ್ಪಷ್ಟನೆ ನೀಡಿದ್ದರು.
ರಾಜವಂಶಗಳ ಚಿಹ್ನೆಗಳಲ್ಲಿ ಬಳಕೆ
ಇತಿಹಾಸದ ವಿಷಯಕ್ಕೆ ಬ೦ದರೆ ಅನೇಕ ರಾಜವಂಶಗಳು ಹಳದಿ ಹಾಗೂ ಕೆಂಪು ಬಣ್ಣಗಳು ಇರುವ ಚಿಹ್ನೆಗಳನ್ನು ಹೊಂದಿದ್ದವು. ಇಂದಿಗೂ ಸರ್ಕಾರಿ ಲಾಂಛನಗಳು ಅದನ್ನು ಹೊಂದಿದ್ದು, ಈ ವಿಷಯವಾಗಿ ಯಾವುದೇ ಗಮನಾರ್ಹ ಐತಿಹಾಸಿಕ ಮಹತ್ವ ಇಲ್ಲ ಎಂಬ ಕಾರಣಕ್ಕಾಗಿ ವಾದ-ವಿವಾದ ನಡೆಯುತ್ತಿದೆ.