ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ

ಲಡಾಖ್‌: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್‌ ಹಾಗೂ ಡೆಸ್ಪಾಂಗ್‌ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇತ್ತೀಚೆಗೆ…

ಲಡಾಖ್‌: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್‌ ಹಾಗೂ ಡೆಸ್ಪಾಂಗ್‌ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ.

ಇತ್ತೀಚೆಗೆ ಎರಡೂ ದೇಶಗಳು ಸೇನಾ ಹಿಂತೆಗೆತಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಆ ಪ್ರಕಾರ ಅ.25ರಂದು ಸೇನಾ ಹಿಂತೆಗೆತ ಆರಂಭವಾಗಿತ್ತು ಹಾಗೂ ಚೀನಾ ಸೈನಿಕರು ಟೆಂಟ್‌ ತೆರವುಗೊಳಿಸಲು ಆರಂಭಿಸಿದ್ದರು. ಅ,28-29ರ ವೇಳೆಗೆ ಹಿಂತೆಗೆತ ಪೂರ್ಣಗೊಳ್ಳಲಿದೆ ಎಂದು ಭಾರತದ ರಕ್ಷಣಾ ಮೂಲಗಳು ಹೇಳಿದ್ದವು.

‘ಆ ಪ್ರಕಾರ ಸೇನಾ ಹಿಂತೆಗೆತ ಬಹುತೇಕ ಮುಕ್ತಾಯವಾಗಿದೆ. ಅಧಿಕೃತ ಘೋಷಣೆ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಬಳಿಕ ಒಪ್ಪಂದದಂತೆ ಎರಡೂ ದೇಶಗಳ ಯೋಧರು ಗಡಿಯಲ್ಲಿ ಜಂಟಿ ಪಹರೆ ನಡೆಸಲಿದ್ದಾರೆ’ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

Vijayaprabha Mobile App free

2020ರಲ್ಲಿ ಲಡಾಖ್‌ನ ಗಲ್ವಾನ್‌ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಬಳಿಕ ಲಡಾಖ್‌ನ 7 ಗಡಿ ಕೇಂದ್ರಗಳಲ್ಲಿ ಉಭಯ ದೇಶಗಳ ಯೋಧರು ಬೀಡು ಬಿಟ್ಟು ಜಟಾಪಟಿ ನಡೆಸಿದ್ದರು. ಆದರೆ ನಂತರದ ಶಾಂತಿ ಮಾತುಕತೆಗಳು ನಡೆದು 5 ಗಡಿಗಳಲ್ಲಿ ಸೇನಾ ಹಿಂತೆಗೆತ ಆಗಿತ್ತು. ಡೆಮ್ಚೋಕ್‌ ಹಾಗೂ ಡೆಸ್ಪಾಂಗ್‌ನಲ್ಲಿ ಮಾತ್ರ ಆಗಿರಲಿಲ್ಲ. ಅಲ್ಲಿ ಈಗ ಸೇನಾ ಹಿಂತೆಗೆತ ಸಾಕಾರ ಆಗುತ್ತಿದ್ದು, ಗಡಿಯಲ್ಲಿ 5 ವರ್ಷಗಳ ಬಳಿಕ ಶಾಂತಿ ನೆಲೆಸುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.