Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » home » how to open a ppf account
Home ಪ್ರಮುಖ ಸುದ್ದಿ

PPF : ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಹೆಚ್ಚು ರಿಟರ್ನ್ಸ್ ಪಡೆದುಕೊಳ್ಳಲು ಏನು ಮಾಡಬೇಕು?

PPF  : ಹೂಡಿಕೆಯ ಉದ್ದೇಶ ದೀರ್ಘಾವಧಿಗೆ ಇದ್ದರೆ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ ಬಡ್ಡಿ ದರ 7.10% ಇದೆ. ಈ ಯೋಜನೆಯ ಅವಧಿಯು 15 ವರ್ಷಗಳು. ಪ್ರತಿ ನವೀಕರಣದಲ್ಲಿ ಮುಕ್ತಾಯದ ನಂತರ…

Author Avatar

ವಿಜಯ್ ಕುಮಾರ್ ಕೆ

October 26, 20247:51 am PPFPPF accountPPF Interest Rateppf passbookPublic Provident Fundಕನ್ನಡ ನ್ಯೂಸ್ಕನ್ನಡ ವಾರ್ತೆಕನ್ನಡ ವಾರ್ತೆಗಳುಕನ್ನಡ ಸುದ್ದಿಗಳುಪಿಪಿಎಫ್ಪಿಪಿಎಫ್ ಖಾತೆಸಾರ್ವಜನಿಕ ಭವಿಷ್ಯ ನಿಧಿ
PPF Account

PPF  : ಹೂಡಿಕೆಯ ಉದ್ದೇಶ ದೀರ್ಘಾವಧಿಗೆ ಇದ್ದರೆ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ ಬಡ್ಡಿ ದರ 7.10% ಇದೆ. ಈ ಯೋಜನೆಯ ಅವಧಿಯು 15 ವರ್ಷಗಳು. ಪ್ರತಿ ನವೀಕರಣದಲ್ಲಿ ಮುಕ್ತಾಯದ ನಂತರ ಖಾತೆಯನ್ನು 5 ವರ್ಷಗಳವರೆಗೆ ಮುಂದುವರಿಸಬಹುಡಗಿದ್ದು, ಹೆಚ್ಚುವರಿಯಾಗಿ ಠೇವಣಿ ಮಾಡಬಹುದು ಅಥವಾ ಮಾಡದಿರಬಹುದು.

ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ರೂ. ನಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದಾಗಿದ್ದು, ಒಬ್ಬರು ವರ್ಷಕ್ಕೆ ಒಂದೇ ಕಂತಿನಲ್ಲಿ ಅಥವಾ ವರ್ಷದಲ್ಲಿ ಗರಿಷ್ಠ 12 ಕಂತುಗಳಲ್ಲಿ ಹಣ ಹೂಡಿಕೆ ಮಾಡಬಹುದು.

ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!

Vijayaprabha Mobile App free

ಅಂಚೆ ಕಚೇರಿಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆ ತೆರೆಯುವುದು ಹೇಗೆ?

  • ನೀವು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನೆಟ್ ಬ್ಯಾಂಕಿಂಗ್ ಮೂಲಕ ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿದೆ. ಈ ಅವಕಾಶವನ್ನು ಅಂಚೆ ಕಚೇರಿ ಇಲಾಖೆ ಕಲ್ಪಿಸುತ್ತದೆ.
  • ಇದಕ್ಕಾಗಿ ಹತ್ತಿರದ ಅಂಚೆ ಕಚೇರಿಯಿಂದ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆ ಪಡೆದು ಫಾರ್ಮ್ ಭರ್ತಿ ಮಾಡಿ.
  • KYC ದಾಖಲೆಗಳು ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಸಲ್ಲಿಸಿ. ನಂತರ ಅಗತ್ಯವಿರುವ ಆರಂಭಿಕ ಠೇವಣಿ ಮಾಡಿ.
  • ಇನ್ನು, ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ PPF ಖಾತೆ ತೆರೆದು ಪಾಸ್‌ಬುಕ್ ನೀಡಲಾಗುತ್ತದೆ.

ಇದನ್ನೂ ಓದಿ: Birth and death certificate : ಇನ್ಮುಂದೆ ಗ್ರಾಮ ಪಂಚಾಯತ್‌ ನಲ್ಲೇ ಸಿಗಲಿದೆ ಜನನ, ಮರಣ ಪ್ರಮಾಣ ಪತ್ರ

ನಿವೃತ್ತಿಗೆ ಹಣ ಹೊಂದಿಸಲು ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಸಲಹೆ

ನೀವು ಉಳಿಸಿದ ಹಣವನ್ನು ಹೂಡಿಕೆ ಮಾಡದೇ ಹೋದರೆ ಹೆಚ್ಚಿನ ಲಾಭ ಸಿಗುವುದಿಲ್ಲ. ನೀವು ಹಣಕಾಸು ಗುರಿಗಳನ್ನು ನಿಗದಿ ಮಾಡಿ ಹೂಡಿಕೆ ಮಾಡಿ. ಆರೋಗ್ಯ ಯಾರಿಗೆ ಯಾವಾಗ ಕೈಕೊಡತ್ತೆ ಎಂದು ಗೊತ್ತಿರುವುದಿಲ್ಲ. ಹೀಗಾಗಿ ಮೊದಲು ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡಿ.

ಇನ್ನು, ಪಿಪಿಎಫ್, ಎಫ್​ಡಿ, ಆರ್​ಡಿ ಇತ್ಯಾದಿ ನಿಶ್ಚಿತ ರಿಟರ್ಸ್ ಇರುವ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಭೂಮಿ ಮತ್ತು ಚಿನ್ನಕ್ಕೆ ಯಾವತ್ತಿದ್ದರೂ ಮೌಲ್ಯ ಇದ್ದೇ ಇರುತ್ತದೆ. ಹಾಗಾಗಿ ಅದರ ಮೇಲೆ ಕೂಡಾ ಹೂಡಿಕೆ ಮಾಡಿ.

PPF ನಲ್ಲಿ ಹೆಚ್ಚು ರಿಟರ್ನ್ಸ್ ಪಡೆದುಕೊಳ್ಳಲು ಏನು ಮಾಡಬೇಕು?

ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿ, ತೆರಿಗೆ ವಿನಾಯಿತಿ ಸೇರಿದಂತೆ ಅನೇಕ ಕಾರಣಗಳಿಂದಾಗಿ ಒಂದು ಅತ್ಯುತ್ತಮ ಭರವಸೆಯಾಗಿದೆ. ಪಿಪಿಎಫ್ ಹೂಡಿಕೆಗಳಲ್ಲಿ ಹೆಚ್ಚು ರಿಟರ್ನ್ಸ್ ಪಡೆಯಲು ನಿಯಮಿತವಾಗಿ ಹಣವನ್ನು ಜಮಾ ಮಾಡುವುದು ಉತ್ತಮ. ಜೊತೆಗೆ ಹಣಕಾಸು ತಜ್ಞರಿಂದ ಸಲಹೆ ಪಡೆದುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಪಿಎಂ ಆವಾಸ್ ಯೋಜನೆಗೆ ಅರ್ಜಿ ಪ್ರಾರಂಭ..! ಇವತ್ತೇ ಅರ್ಜಿ ಸಲ್ಲಿಸಿ, ಸಂಪೂರ್ಣ ಮಾಹಿತಿ ಇಲ್ಲಿದೆ

By Surendran Sub editor June 27, 2024
#ट्रेंडिंग हैशटैग:PPFPPF accountPPF Interest Rateppf passbookPublic Provident Fundಕನ್ನಡ ನ್ಯೂಸ್ಕನ್ನಡ ವಾರ್ತೆಕನ್ನಡ ವಾರ್ತೆಗಳುಕನ್ನಡ ಸುದ್ದಿಗಳುಪಿಪಿಎಫ್ಪಿಪಿಎಫ್ ಖಾತೆಸಾರ್ವಜನಿಕ ಭವಿಷ್ಯ ನಿಧಿ

Post navigation

Previous Previous post: Shani dosha | ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿದೋಷ ದೂರ
Next Next post: Pregnant Teen Killed: ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರಿಯತಮೆಯನ್ನೇ ಹತ್ಯೆಗೈದ ಪ್ರಿಯಕರ!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By