Shani dosha : ಶನಿವಾರ ರೊಟ್ಟಿ, ಎಣ್ಣೆ ದಾನ, ಶಿವನ ಆರಾಧನೆ (Worship of Shiva) ಜೊತೆಗೆ ಈ ಕೆಲಸಗಳನ್ನು ಮಾಡಿದರೆ ಶನಿದೋಷ (Shani dosha) ದೂರವಾಗುತ್ತದೆ ಎನ್ನುತ್ತಾರೆ ಜೋತಿಷಿ ತಜ್ಞರು.
ಹೌದು, ಶನಿವಾರ ಸಂಜೆ ಕಪ್ಪು ನಾಯಿ ಅಥವಾ ಕಪ್ಪು ಹಸುವಿಗೆ ರೊಟ್ಟಿಯನ್ನು ತಿನ್ನಲು ಕೊಡಿ. ಈ ರೊಟ್ಟಿಯನ್ನು ಸಾಸಿವೆ ಎಣ್ಣೆಯನ್ನು ಬಳಸಿಕೊ೦ಡು ತಯಾರಿಸಿದ್ದರೆ ಉತ್ತಮ. ಒ೦ದು ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊ೦ಡು ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ. ಮತ್ತು ಆ ಎಣ್ಣೆಯೊಂದಿಗೆ ಆ ಪಾತ್ರೆಯನ್ನು ಕೂಡ ದಾನ ಮಾಡಬೇಕು.
ಇದನ್ನೂ ಓದಿ: Rashi bhavishya : ಇಂದಿನ ರಾಶಿ ಭವಿಷ್ಯ; 26-10-2024 ಶನಿವಾರ
ಶಿವನ ಆರಾಧನೆ ಮಾಡಿದರೆ Shani Dosha ದೂರ
ಶನಿವಾರ ಶಿವನನ್ನು ಪೂಜಿಸಿ. ಸಾಧ್ಯವಾದರೆ ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಶಿವಲಿಂಗದ ಮೇಲೆ ಅರ್ಪಿಸಬೇಕು. ಜೊತೆಗೆ ಓಂ ನಮಃ ಶಿವಾಯ ಎ೦ದು ಶಿವ ಪಂಚಾಕ್ಷರ ಮಂತ್ರ ಪಠಿಸಿ, ಶಿವನನ್ನು ಪೂಜಿಸಿದ ನಂತರ, ಶನಿ ದೇವರನ್ನು ಸಹ ಪೂಜಿಸಿ. ಈ ದಿನ ಶಿವ ಚಾಲೀಸಾ ಮತ್ತು ಶನಿ ಚಾಲೀಸಾ ಎರಡನ್ನೂ ಪಠಿಸಿದರೆ ಉತ್ತಮ.
ಈ ವಸ್ತುಗಳ ದಾನ
ಉದ್ದಿನ ಬೇಳೆ, ಕಪ್ಪು ಬಣ್ಣದ ಚಪ್ಪಲಿ, ಕಪ್ಪು ಎಳ್ಳು, ಉದ್ದಿನ ಖಿಚಡಿ, ಛತ್ರಿ ಮತ್ತು ಕಂಬಳಿ ಇತ್ಯಾದಿಗಳನ್ನು ಶನಿವಾರ ದಾನ ಮಾಡಿ. ಇದು ಶನಿ ದೋಷವನ್ನು ದೂರಮಾಡುತ್ತದೆ. ಇದರೊಂದಿಗೆ ಶನಿವಾರದಂದು ಸಾಧ್ಯವಾದಷ್ಟು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ.
ಶನಿ ಯಂತ್ರವನ್ನು ಪೂಜಿಸಿ
ಶನಿವಾರದ ದಿನದ೦ದು ಮನೆಯಲ್ಲಿ ಶನಿ ಯ೦ತ್ರವನ್ನು ಪೂಜಿಸಬೇಕು. ಇದರಿಂದ ಶನಿಯ ಅನುಗ್ರಹವನ್ನು ಪಡೆದುಕೊ೦ಡು ಶನಿ ದೋಷದಿಂದ (Shani dosha) ಮುಕ್ತಿ ಕಾಣಬಹುದು. ಅಲ್ಲದೆ ಸಾಧ್ಯವಾದಷ್ಟು ಬಾರಿ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಎನ್ನುವ ಮ೦ತ್ರವನ್ನು ಪಠಿಸಿದರೆ ಶುಭವಾಗುತ್ತದೆ.
ಇದನ್ನೂ ಓದಿ: Nitya panchanga | ಇಂದು ಶನಿವಾರ 26-10-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಹನಮಂತನ ಪೂಜೆ
ಈ ದಿನ ಹನುಮಾನ್ ದೇವಸ್ಥಾನಕ್ಕೆ ತರೆಳಬೇಕು. ಹನುಮಾನ್ ಚಾಲೀಸಾ ಪಠಿಸಿ, ವೀಳ್ಯದೆಲೆಯನ್ನು ಅರ್ಪಿಸಬೇಕು. ಜೊತೆಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ. ಶನಿ ದೇವಸ್ಥಾನಕ್ಕೆ ನೀಲಿ ಬಣ್ಣದ ಅಥವಾ ನೇರಳೆ ಬಣ್ಣದ ಹೂವುಗಳನ್ನು ಅರ್ಪಿಸಿ.
ಹೀಗೆ ಮಾಡಿದರೆ ಶುಭ
ಶನಿವಾರದಂದು ಪೊರಕೆಗಳನ್ನು ಖರೀದಿಸಿದರೆ ಮಂಗಳಕರವಾಗಿರುವುದರಿಂದ ಈ ದಿನ ಪೊರಕೆಯನ್ನು ಖರೀದಿಸಿ. ಶನಿವಾರದಂದು ಕಬ್ಬಿಣದ ವಸ್ತುಗಳು ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬೇಡಿ. ಅಲ್ಲದೆ ಎಳ್ಳು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಶುಭವಾಗುತ್ತದೆ.