PPF : ಹೂಡಿಕೆಯ ಉದ್ದೇಶ ದೀರ್ಘಾವಧಿಗೆ ಇದ್ದರೆ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ ಬಡ್ಡಿ ದರ 7.10% ಇದೆ. ಈ ಯೋಜನೆಯ ಅವಧಿಯು 15 ವರ್ಷಗಳು. ಪ್ರತಿ ನವೀಕರಣದಲ್ಲಿ ಮುಕ್ತಾಯದ ನಂತರ ಖಾತೆಯನ್ನು 5 ವರ್ಷಗಳವರೆಗೆ ಮುಂದುವರಿಸಬಹುಡಗಿದ್ದು, ಹೆಚ್ಚುವರಿಯಾಗಿ ಠೇವಣಿ ಮಾಡಬಹುದು ಅಥವಾ ಮಾಡದಿರಬಹುದು.
ಪಿಪಿಎಫ್ ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ರೂ. ನಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದಾಗಿದ್ದು, ಒಬ್ಬರು ವರ್ಷಕ್ಕೆ ಒಂದೇ ಕಂತಿನಲ್ಲಿ ಅಥವಾ ವರ್ಷದಲ್ಲಿ ಗರಿಷ್ಠ 12 ಕಂತುಗಳಲ್ಲಿ ಹಣ ಹೂಡಿಕೆ ಮಾಡಬಹುದು.
ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!
ಅಂಚೆ ಕಚೇರಿಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆ ತೆರೆಯುವುದು ಹೇಗೆ?
- ನೀವು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನೆಟ್ ಬ್ಯಾಂಕಿಂಗ್ ಮೂಲಕ ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿದೆ. ಈ ಅವಕಾಶವನ್ನು ಅಂಚೆ ಕಚೇರಿ ಇಲಾಖೆ ಕಲ್ಪಿಸುತ್ತದೆ.
- ಇದಕ್ಕಾಗಿ ಹತ್ತಿರದ ಅಂಚೆ ಕಚೇರಿಯಿಂದ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆ ಪಡೆದು ಫಾರ್ಮ್ ಭರ್ತಿ ಮಾಡಿ.
- KYC ದಾಖಲೆಗಳು ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಸಲ್ಲಿಸಿ. ನಂತರ ಅಗತ್ಯವಿರುವ ಆರಂಭಿಕ ಠೇವಣಿ ಮಾಡಿ.
- ಇನ್ನು, ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ PPF ಖಾತೆ ತೆರೆದು ಪಾಸ್‌ಬುಕ್ ನೀಡಲಾಗುತ್ತದೆ.
ಇದನ್ನೂ ಓದಿ: Birth and death certificate : ಇನ್ಮುಂದೆ ಗ್ರಾಮ ಪಂಚಾಯತ್ ನಲ್ಲೇ ಸಿಗಲಿದೆ ಜನನ, ಮರಣ ಪ್ರಮಾಣ ಪತ್ರ
ನಿವೃತ್ತಿಗೆ ಹಣ ಹೊಂದಿಸಲು ಎಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ಸಲಹೆ
ನೀವು ಉಳಿಸಿದ ಹಣವನ್ನು ಹೂಡಿಕೆ ಮಾಡದೇ ಹೋದರೆ ಹೆಚ್ಚಿನ ಲಾಭ ಸಿಗುವುದಿಲ್ಲ. ನೀವು ಹಣಕಾಸು ಗುರಿಗಳನ್ನು ನಿಗದಿ ಮಾಡಿ ಹೂಡಿಕೆ ಮಾಡಿ. ಆರೋಗ್ಯ ಯಾರಿಗೆ ಯಾವಾಗ ಕೈಕೊಡತ್ತೆ ಎಂದು ಗೊತ್ತಿರುವುದಿಲ್ಲ. ಹೀಗಾಗಿ ಮೊದಲು ಆರೋಗ್ಯ ವಿಮೆಯಲ್ಲಿ ಹೂಡಿಕೆ ಮಾಡಿ.
ಇನ್ನು, ಪಿಪಿಎಫ್, ಎಫ್ಡಿ, ಆರ್ಡಿ ಇತ್ಯಾದಿ ನಿಶ್ಚಿತ ರಿಟರ್ಸ್ ಇರುವ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಭೂಮಿ ಮತ್ತು ಚಿನ್ನಕ್ಕೆ ಯಾವತ್ತಿದ್ದರೂ ಮೌಲ್ಯ ಇದ್ದೇ ಇರುತ್ತದೆ. ಹಾಗಾಗಿ ಅದರ ಮೇಲೆ ಕೂಡಾ ಹೂಡಿಕೆ ಮಾಡಿ.
PPF ನಲ್ಲಿ ಹೆಚ್ಚು ರಿಟರ್ನ್ಸ್ ಪಡೆದುಕೊಳ್ಳಲು ಏನು ಮಾಡಬೇಕು?
ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿ, ತೆರಿಗೆ ವಿನಾಯಿತಿ ಸೇರಿದಂತೆ ಅನೇಕ ಕಾರಣಗಳಿಂದಾಗಿ ಒಂದು ಅತ್ಯುತ್ತಮ ಭರವಸೆಯಾಗಿದೆ. ಪಿಪಿಎಫ್ ಹೂಡಿಕೆಗಳಲ್ಲಿ ಹೆಚ್ಚು ರಿಟರ್ನ್ಸ್ ಪಡೆಯಲು ನಿಯಮಿತವಾಗಿ ಹಣವನ್ನು ಜಮಾ ಮಾಡುವುದು ಉತ್ತಮ. ಜೊತೆಗೆ ಹಣಕಾಸು ತಜ್ಞರಿಂದ ಸಲಹೆ ಪಡೆದುಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.