Anila Bhagya Yojana : ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್; ಸಿಗುವ ಸೌಲಭ್ಯಗಳು, ಪಡೆಯುವ ವಿಧಾನ ಹೇಗೆ..?

Anila Bhagya Yojana: ಕರ್ನಾಟಕ ಸರ್ಕಾರವು 2017ರಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ, ಉಚಿತ ಎಲ್‌ಪಿಜಿ…

Anila Bhagya Yojana

Anila Bhagya Yojana: ಕರ್ನಾಟಕ ಸರ್ಕಾರವು 2017ರಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯಡಿ, ಉಚಿತ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಜೊತೆಗೆ ಡಬಲ್ ಗ್ಯಾಸ್ ಬರ್ನರ್ ಸ್ಟವ್ ಮತ್ತು ಎರಡು ಸಿಲಿಂಡರ್ ರೀಫಿಲ್‌ಗಳನ್ನು ಪ್ರತಿ ಫಲಾನುಭವಿಗಳ ಕುಟುಂಬಗಳಿಗೆ ನೀಡುತ್ತದೆ. ಫಲಾನುಭವಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಗಳಲ್ಲಿ ನೋಂದಣಿ ಮಾಡುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: BPL card : ಮಾನದಂಡಗಳ ವಿರುದ್ಧವಾಗಿ ಬಿಪಿಎಲ್​ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಖಡಕ್​ ಸೂಚನೆ

Vijayaprabha Mobile App free

ಅನಿಲ ಭಾಗ್ಯ ಯೋಜನೆಯಿಂದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು (Benefits of Anila Bhagya Yojana)

ಅನಿಲ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದದವರಿಗೆ ಉಚಿತ ಅಡುಗೆ ಒಲೆ ಮತ್ತು ದೇಶೀಯ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲಾಗುತ್ತದೆ. ಜೊತೆಗೆ ಡಬಲ್ ಗ್ಯಾಸ್ ಬರ್ನರ್ ಸ್ಟೌ , 2 ಸಿಲಿಂಡರ್ ರೀಫಿಲ್‌ ಅನ್ನೂ ಸಹ ಪಡೆಯಬಹುದು.

ಕರೋಸಿನ್, ಉರುವಲು ಅನ್ನು ಅಡುಗೆ ಮಾಡಲು ಬಳಸುವ 1 ಕೋಟಿ ಬಿಪಿಎಲ್ ಕುಟುಂಬಗಳು ಸುಮಾರು 40% ನಷ್ಟು ಪ್ರಯೋಜನವನ್ನು ಪಡೆಯಬಹುದು. ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಬಳಕೆಯಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ಅನಿಲ ಭಾಗ್ಯ ಯೋಜನೆಯಿಂದ ಕಡಿಮೆ ಮಾಡಬಹುದು.

ಇದನ್ನೂ ಓದಿ: Bhagyalakshmi yojana : ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು? ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡಲು ನಿಯಮಗಳೇನು?

ಅನಿಲ ಭಾಗ್ಯ‌ ಯೋಜನೆಯ ಉಚಿತ ಗ್ಯಾಸ್ ಪಡೆಯುವ ವಿಧಾನ (How to Get Free Gas under Anila Bhagya Yojana)

ರಾಜ್ಯ ಸರ್ಕಾರವು ಬಿಪಿಎಲ್‌ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿದ ಅನಿಲ ಭಾಗ್ಯ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಯೋಜನೆಯ ಫಲಾನುಭವಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್‌ಗಳ ಮೂಲಕ ಅನಿಲಾ ಭಾಗ್ಯ ಸ್ಕೀಮ್ ನೋಂದಣಿಗಳನ್ನು ಮಾಡಿ ಪ್ರಯೋಜನಗಳನ್ನು ಪಡೆಯಬಹುದು. ಅನಿಲ ಭಾಗ್ಯ‌ ಯೋಜನೆಯ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಎರಡು ಬಾರಿ ಅರ್ಜಿ ಸಲ್ಲಿಸುವಂತಿಲ್ಲ (Application for Anila Bhagya Yojana)

ಅನಿಲ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ಸರ್ಕಾರವು ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸುಮಾರು 30 ದಿನ ತೆಗೆದುಕೊಳ್ಳುತ್ತಿದ್ದು, ಅರ್ಜಿಗಳ ದೃಢೀಕರಣವನ್ನು ಪರಿಶೀಲಿಸಲು SECC-2011 ಹೆಸರಿನ ಡೇಟಾ ಪಟ್ಟಿಯನ್ನು ಬಳಸಲಾಗುತ್ತದೆ. ಫಲಾನುಭವಿಗಳ ಮಾಹಿತಿಯನ್ನು ಅಪ್ಲಿಕೇಷನ್ ಮೂಲಕ ಅರ್ಜಿದಾರರು ಮೊದಲೇ ಉಚಿತ ಸಂಪರ್ಕವನ್ನು ಪಡೆದುಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಲಿದ್ದು, ಅರ್ಜಿದಾರರು ಎರಡು ಬಾರಿ ಅರ್ಜಿ ಸಲ್ಲಿಸಿದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಪ್ರಮುಖ ವಿಷಯಗಳು (Important topics of Anila Bhagya Yojana)

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಿಂದ ಉಚಿತವಾಗಿ ಸಿಗುವ ಎಲ್ ಪಿಜಿ ಗ್ಯಾಸ್ ಸಿಲಿಂಡರ್, ಹೊಗೆರಹಿತ ಅಡುಗೆಯ ತಂತ್ರವಾಗಿರುವುದರಿಂದ ಆರೋಗ್ಯದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ. ಇದು ಅಡುಗೆಯ ಆರ್ಥಿಕ, ಸಮರ್ಥನೀಯ ವಿಧಾನವಾಗಿರುವುದರಿಂದ ಪರಿಸರ ಹಾನಿಯನ್ನು ಕಡಿಮೆ ಮಾಡುತ್ತದೆ. ಉಜ್ವಲದಡಿ 1600 ರೂಪಾಯಿ ಪಡೆಯುವ ಕುಟುಂಬಕ್ಕೆ ಹೋಲಿಸಿದರೆ ಈ ಯೋಜನೆಯಡಿ ಒಂದು ಕುಟುಂಬಕ್ಕೆ 1,920 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ಈ ಯೋಜನೆಯಡಿ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.